ಉಪ್ಪಳ: ಯುವತಿಯೋರ್ವೆ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಆನೆಕಲ್ಲು ಶ್ರೀ ಗೋಪಾಲಕೃಷ್ಣ ಕ್ಷೇತ್ರ ಬಳಿಯ ನಿವಾಸಿ ರಾಮ ಎಂಬವರ ಪುತ್ರಿ ಅನುಪ್ರಿಯ (20) ನಾಪತ್ತೆಯಾ ಗಿರುವುದಾಗಿ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಿನ್ನೆ ಸಂಜೆ 6 ಗಂಟೆ ವೇಳೆ ಮನೆಯಿಂದ ಹೊರಗೆ ಹೋದ ಯುವತಿ ಮರಳಿ ಬಂದಿಲ್ಲವೆಂದು ಸಹೋದರ ಅವಿನಾಶ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.