ಯುವತಿ ನಾಪತ್ತೆ: ಎರ್ನಾಕುಳಂ ನಿವಾಸಿಯೊಂದಿಗೆ ಪರಾರಿ ಶಂಕೆ
ಬದಿಯಡ್ಕ: ತಾಯಿಯ ಫೋನ್ ಅಪರಿಮಿತವಾಗಿ ಬಳಸುತ್ತಿರುವುದನ್ನು ಪ್ರಶ್ನಿಸಿದ ಬೆನ್ನಲ್ಲೇ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ.
ಬಾರಡ್ಕ ನಿವಾಸಿ ನಾಪತ್ತೆಯಾಗಿದ್ದಾಳೆನ್ನಲಾಗಿದೆ. ಘಟನೆ ಬಗ್ಗೆ ಮನೆಯವರು ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸ್ವಂತವಾಗಿ ಮೊಬೈಲ್ ಫೋನ್ ಇಲ್ಲದ ಯುವತಿ ತಾಯಿಯ ಮೊಬೈಲ್ ಫೋನ್ ಬಳಸುತ್ತಿದ್ದಳು. ಫೋನ್ ಅಪರಿಮಿತವಾಗಿ ಬಳಸುತ್ತಿರುವುದನ್ನು ಪ್ರಶ್ನಿಸಿ ತಾಕೀತು ನೀಡಲಾಗಿತ್ತೆನ್ನಲಾಗಿದೆ. ಅಲ್ಲದೆ ಯುವತಿ ಇನ್ಸ್ಟಾಗ್ರಾಂ ಮೂಲಕ ಪರಿಚಯಗೊಂಡ ನಂಬ್ರವನ್ನು ಬ್ಲೋಕ್ ಮಾಡಲಾಗಿತ್ತೆನ್ನಲಾಗಿದೆ. ಅದರ ಬೆನ್ನಲ್ಲೇ ಯುವತಿ ನಾಪತ್ತೆಯಾಗಿದ್ದಾಳೆ. ಯುವತಿಯ ನಾಪತ್ತೆಗೆ ಸಂಬಂಧಿಸಿ ಎರ್ನಾಕುಳಂ ನಿವಾಸಿಯನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.