ಯುವತಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಯುವತಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೊಸದುರ್ಗ ಸಮೀಪದ ಮಡಿಕೈ ಅಡ್ಕತ್ತ್ಪರಂ ಬಿನಲ್ಲಿ ಕಳೆದ ಒಂದೂವರೆ ವರ್ಷದಿಂದ ವಾಸಿಸುತ್ತಿರುವ ಶೈಜು ಎಂಬವರ ಪತ್ನಿ ಅಂಜಲಿ (30) ಸಾವನ್ನಪ್ಪಿದ ಯುವತಿ. ಇವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೂಲತಃ ಚೇಟುಕುಂಡು ನಿವಾಸಿಯಾಗಿರುವ ಮೃತ ಅಂಜಲಿ ನೀಲೇಶ್ವರದ ಜವುಳಿ ಅಂಗಡಿಯೊಂ ದರಲ್ಲಿ ದುಡಿಯುತ್ತಿದ್ದರು. ನೀಲೇಶ್ವರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳ ಪಡಿಸಲಾಯಿತು.