ಯುವತಿಗೆ ಹಲ್ಲೆಗೈದು ಕೊಲೆಗೆತ್ನ : ಆರೋಪಿ ಪತಿ ಬಂಧನ

ಬದಿಯಡ್ಕ: ಯುವತಿಗೆ ಹಲ್ಲೆಗೈದು, ಕುತ್ತಿಗೆ ಬಿಗಿದು ಕೊಲೆಗೈಯ್ಯಲು ಯತ್ನಿ ಸಲಾಯಿತೆಂಬ ಆರೋಪದಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೇಳ ಕುಂಜಾರು ನಿವಾಸಿ ಕೆ.ಎ. ಖೈರುನ್ನೀಸ (37) ನೀಡಿದ ದೂರಿನಂತೆ ಈಕೆಯ ಪತಿ ಅಬ್ದುಲ್ ರಹ್ಮಾನ್‌ನನ್ನು ಬದಿ ಯಡ್ಕ ಪೊಲೀಸರು ಬಂಧಿಸಿದ್ದಾರೆ. ಬುಧವಾರ ಮುಂಜಾನೆ 2  ಗಂಟೆ ವೇಳೆ ಪತಿ ಅಬ್ದುಲ್ ರಹ್ಮಾನ್ ತನಗೆ ಹಲ್ಲೆಗೈದು ಕೊಲೆಗೈಯ್ಯಲು  ಯತ್ನಿಸಿರುವುದಾಗಿ ಆರೋಪಿಸಿ ಖೈರುನ್ನೀಸ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಅಬ್ದುಲ್ ರಹ್ಮಾನ್ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಆತನಿಗೆ ಜಾಮೀನು  ನೀಡ ಲಾಗಿದೆ.

You cannot copy contents of this page