ಯುವತಿಯನ್ನು ಚರ್ಚ್‌ಗೆ ಕರೆಸಿ ಕಿರುಕುಳ ಯತ್ನ: ಧರ್ಮಗುರು ವಿರುದ್ಧ ಕೇಸು
ಕಾಸರಗೋಡು: 33ರ ಹರೆ ಯದ ಯುವತಿಯನ್ನು ಚರ್ಚ್‌ಗೆ ಬರಮಾಡಿ ಆಕೆಗೆ ಕಿರುಕುಳ ನೀಡಲೆತ್ನಿಸಿದ ಆರೋಪ ದಂತೆ ಧರ್ಮಗುರು ವಿರುದ್ಧ ಕಾಸರಗೋಡು ಮಹಿಳಾ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಯುವತಿ ನೀಡಿದ ದೂರಿನಂತೆ ವೆಳ್ಳರಿಕುಂಡ್ ವಿಮಲಗಿರಿ ಚರ್ಚ್‌ನ ಧರ್ಮಗುರು ವಾಗಿದ್ದ ಫಾ| ಮ್ಯಾಥ್ಯೂ ಕೋಳಿ ವಿರುದ್ಧ ಕೇಸು ದಾಖಲಿಸಲಾಗಿದೆ. 2022 ಡಿಸೆಂಬರ್ 16ರಂದು ಹಾಗೂ 2024 ಸೆಪ್ಟಂಬರ್ 2ರಂದು ಯುವತಿಯನ್ನು ಚರ್ಚ್‌ಗೆ ಕರೆಸಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಯುವತಿ ಚರ್ಚ್‌ನ ಸಂಬಂ ಧಪಟ್ಟವರಿಗೂ ದೂರು ನೀಡಿದ್ದಳು. ಅದರ ಆಧಾರದಲ್ಲಿ ಫಾ| ಮ್ಯಾಥ್ಯೂ ಕೋಳಿಯವರನ್ನು ವಿಮಲಗಿರಿ ಚರ್ಚ್‌ನಿಂದ ತೆರವು ಗೊಳಿಸಲಾಗಿತ್ತು.