ಯುವಮೋರ್ಛಾ ನೇತಾರ ಪ್ರವೀಣ್ ನೆಟ್ಟಾರು ಕೊಲೆ: ಎನ್.ಐ.ಎ ಮತ್ತೆ ಕೇರಳಕ್ಕೆ

ಕಾಸರಗೋಡು: ಸುಳ್ಯ ಬೆಳ್ಳಾರೆಯ ಯುವಮೋರ್ಛಾ ನೇತಾರ ಪ್ರವೀಣ್ ನೆಟ್ಟಾರು ಅವರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಗಳನ್ನು ಪತ್ತೆಹಚ್ಚಲು ಎನ್‌ಐಎ   ದಾಳಿ ಮುಂದುವರಿ ಸಿದೆ. ಇದರಂತೆ ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ಆರೋಪಿಗಳಿಗಾಗಿ ಶೋಧ ನಡೆ ಯುತ್ತಿದೆ. ಕೊಲೆಕೃತ್ಯಕ್ಕೆ ಸಂಚುಹೂಡಿದ ತಂಡದಲ್ಲಿದ್ದನೆಂದು ಸಂಶಯಿಸಲಾದ ಪುತ್ತೂರು ಕೈಯೂಡಿಯ ಅಬೂಬಕ್ಕರ್ ಸಿದ್ದಿಕ್‌ನ ಉಪ್ಪಿನಂಗಡಿಯಲ್ಲಿರುವ   ಪತ್ನಿ ಮನೆಗೆ ಎನ್‌ಐಎ ದಾಳಿ ನಡೆಸಿದೆ. ಆದರೆ ಆತನನ್ನು ಪತ್ತೆಹಚ್ಚಲಾಗಲಿಲ್ಲ. ಇದರಿಂದ ಕಾಸರಗೋಡಿಗೆ ಬಂದ ಎನ್‌ಐಎ ತಂಡ ಕಣ್ಣೂರಿಗೆ ತೆರಳಿ   ಇಬ್ಬರನ್ನು ಕಸ್ಟಡಿಗೆ  ತೆಗೆದುಕೊಂಡಿರುವುದಾಗಿ ಸೂಚನೆಯಿದೆ. ಎನ್‌ಐಎಯ ಮತ್ತೊಂದು ತಂಡ ಕೊಚ್ಚಿಯಲ್ಲಿ ದಾಳಿ ಮುಂದುವರಿಸಿದೆ. ೨೦೨೨ ಜೂನ್ ೨೨ರಂದು ರಾತ್ರಿ ಪ್ರವೀಣ್ ನೆಟ್ಟಾರು ಅವರನ್ನು ತಂಡವೊಂದು ಇರಿದು ಕೊಲೆಗೈದಿತ್ತು. ಕೋಳಿ ಅಂಗಡಿ ಮುಚ್ಚಿ ಮನೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾಗ ತಲುಪಿದ ತಂಡ ಕೊಲೆಗೈದಿತ್ತು. ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಆರೋಪಿ ಗಳನ್ನು ಸೆರೆಹಿಡಿಯಲಾಗಿದೆ. ಆದರೆ ಈ ಕಲೆಯ ಹಿಂದೆ ಭಾರೀ ಸಂಚು ನಡೆದಿದೆ.  ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿರುವ ಕೆಲವರು ಸಂಚಿನಲ್ಲಿ ಪಾಲ್ಗೊಂಡಿದ್ದಾರೆಂದು ಹೇಳಲಾಗುತ್ತಿದೆ.

You cannot copy contents of this page