ಯೂತ್ ಕಾಂಗ್ರೆಸ್ ಮಾರ್ಚ್‌ನಲ್ಲಿ ಘರ್ಷಣೆ : ಜಲಪಿರಂಗಿ ಪ್ರಯೋಗಿಸಿದ ಪೊಲೀಸರು
ಕಾಸರಗೋಡು: ಮುಖ್ಯಮಂತ್ರಿಯವರ ಕಚೇರಿಯ ಹಾಗೂ ಎಡಿಜಿಪಿಯೋರ್ವರ ಮೇಲೆ ಆಡಳಿತ ಪಕ್ಷದ ಶಾಸಕರೋರ್ವರು ಮಾಡಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಅದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಯೂತ್ ಕಾಂಗ್ರೆಸ್‌ನ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಿನ್ನೆ ಜಿಲ್ಲಾ ಪೊಲೀಸ್ ಕಚೇರಿಗೆ ನಡೆದ ಮಾರ್ಚ್‌ನಲ್ಲಿ ಘರ್ಷಣೆ ಉಂಟಾಗಿದೆ. ಅದರಿಂದಾಗಿ ಚಳವಳಿ ನಿರತರನ್ನು ಚದುರಿಸಲು ಪೊಲೀಸರು ಜಲಪಿರಂಗಿ ಪ್ರಯೋಗವನ್ನೂ ನಡೆಸಿದರು.
ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜೋಮೋನ್ ಜೋಸ್ ಮಾರ್ಚನ್ನು ಉದ್ಘಾಟಿಸಿದರು. ಮುಖ್ಯಮಂತ್ರಿ ರಾಜೀನಾಮೆ ನೀಡುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು. ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಆರ್. ಕಾರ್ತಿಕೇಯನ್ ಅಧ್ಯಕ್ಷತೆ ವಹಿಸಿದರು. ಡಿಸಿಸಿ ಉಪಾಧ್ಯಕ್ಷ ಬಿ.ಪಿ. ಪ್ರದೀಪ್ ಕುಮಾರ್ ಶೇಣಿ ಕೆ. ಥೋಮಸ್ ಸೇರಿದಂತೆ ಹಲವರು ಮಾತನಾಡಿದರು.