ರಂಜಾನ್ ಪ್ರಯುಕ್ತ 500ಕ್ಕೂ ಹೆಚ್ಚು ಭಾರತೀಯ ಖೈದಿಗಳಿಗೆ ಯು.ಎ.ಇಯಿಂದ ಕ್ಷಮಾದಾನ

ಅಬುದಾಬಿ: ಪವಿತ್ರ ರಂಜಾನ್ ತಿಂಗಳಲ್ಲಿ ಯುಎಇ 500 ಭಾರತೀಯ ಖೈದಿಗಳಿಗೆ ಕ್ಷಮಾದಾನ ಘೋಷಿಸಿದೆ. ಇವರನ್ನು ಶೀಘ್ರ ಬಿಡುಗಡೆ ಮಾಡುವುದೆಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಯುಎಇ ಯ ವಿವಿಧ ಜೈಲುಗಳಲ್ಲಾಗಿ ಕಳೆಯು ತ್ತಿರುವ  ಖೈದಿಗಳ ಪೈಕಿ  1295 ಖೈದಿ ಗಳನ್ನು ಬಿಡುಗಡೆ ಮಾಡಲು  ಯುಎಇ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಆದೇಶ ನೀಡಿದ್ದರು.  ಇದರ ಬೆನ್ನಲ್ಲೇ ಪ್ರಧಾನಿ ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮುಕ್ತೌಮ್ ಅವರು 1518 ಖೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ. ಹೀಗೆ ಕ್ಷಮಾದಾನಕ್ಕೊಳಗಾದವರಲ್ಲಿ 500 ಮಂದಿ ಭಾರತೀಯರಾಗಿದ್ದು, ಅದರಲ್ಲಿ ಕೇರಳೀಯರೂ ಒಳಗೊಂಡಿದ್ದಾರೆ.

ರಂಜಾನ್ ತಿಂಗಳಲ್ಲಿ ಖೈದಿಗಳನ್ನು ಕ್ಷಮಿಸುವ ಈ ವಾರ್ಷಿಕ ಸಂಪ್ರದಾಯವು ನ್ಯಾಯ, ಸಹಾನುಭೂತಿ ಮತ್ತು ಭಾರತದೊಂದಿಗೆ ಬಲವಾದ ರಾಜತಾಂತ್ರಿಕ ಸಂಬಂಧಗಳನ್ನು ಕಾಪಾಡಿಕೊಳ್ಳುವ ಯುಎಇಯ ಬದ್ಧತೆಯನ್ನು ಪ್ರತಿಬಿಂಬಿಸುತ್ತಿದೆ. ಇದು ಈ ಪವಿತ್ರ ತಿಂಗಳ ಸ್ಪೂರ್ತಿಗೆ ಅನುಗುಣವಾಗಿ ಕರುಣೆ ಮತ್ತು   ಸಾಮರಸ್ಯದ ಮಹತ್ವದ ಸಂಕೇತವಾಗಿದೆ.

ಶೇಕ್ ಮೊಹಮ್ಮದ್ ಬಿನ್ ರಶೀದ್ ನೀಡಿದ ಕ್ಷಮಾದಾನವು ದುಬೈಯ ಸುಧಾರಣಾ ಮತ್ತು ದಂಡನಾತ್ಮಕ ಸೌಲಭ್ಯಗಳಲ್ಲಿ ಬಂಧನಕ್ಕೊಳಗಾದ ವಿವಿಧ ರಾಷ್ಟ್ರಗಳ ವ್ಯಕ್ತಿಗಳಿಗೆ ಅನ್ವಯಿಸುತ್ತಿದೆ. ಕ್ಷಮಾದಾನವು ಖೈದಿಗಳು ತಮ್ಮ ಕುಟುಂಬಗಳೊಂದಿಗೆ ಮತ್ತೆ ಒಂದಾಗಲು  ಅನುವು ಮಾಡಿಕೊಡುತ್ತಿದೆ. ಯುಎಇ ಅಧಿಕಾರಿಗಳು ತಿಳಸಿದ್ದಾರೆ.

You cannot copy contents of this page