ರವೀಂದ್ರನ್ ಪಾಡಿಗೆ ಕುವೆಂಪು ಕನ್ನಡ ರತ್ನ ಪ್ರಶಸ್ತಿ : ಕಾಸರಗೋಡು-ಕೋಲಾರ ಕನ್ನಡ ಉತ್ಸವ ನಾಳೆ
ಕಾಸರಗೋಡು: ಕೋಲಾರ ಸ್ವರ್ಣ ಭೂಮಿ ಫೌಂಡೇಶನ್, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ರೋಟರಿ ಕ್ಲಬ್ ಕೋಲಾರ ಇದರ ಜಂಟಿ ಆಶ್ರಯದಲ್ಲಿ ಕಾಸರಗೋಡು-ಕೋಲಾರ ಕನ್ನಡ ಉತ್ಸವ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ, ಕನ್ನಡ ಪಯಸ್ವಿನಿ ಪ್ರಶಸ್ತಿ, ಕುವೆಂಪು ವಿಶ್ವಮಾನವ ಕನ್ನಡ ರತ್ನ ಪ್ರಶಸ್ತಿ ಪ್ರದಾನ ನಾಳೆ ಅಪರಾಹ್ನ 2.30ಕ್ಕೆ ಕೋಲಾರ ಅಂತರಗಂಗೆಯ ಲ್ಲಿರುವ ಪತ್ರಕರ್ತರ ಭವನದಲ್ಲಿ ಜರಗಲಿದೆ.
ಕಾರ್ಯಕ್ರಮವನ್ನು ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ಉದ್ಘಾಟಿಸುವರು. ಕಾಸರಗೋಡು ಜಿಲ್ಲೆಯ ಮಲೆಯಾಳ ಸಾಹಿತಿ, ಕವಿ ರವೀಂದ್ರನ್ ಪಾಡಿ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 11 ಮಂದಿಗೆ ಕುವೆಂಪು ವಿಶ್ವಮಾನವ ಕನ್ನಡರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ವೇಳೆ ೮ ಮಂದಿ ಗಣ್ಯ ವ್ಯಕ್ತಿಗಳಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ ನೀಡಲಾಗುವುದು. ಹಲವು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕವಿ ರವೀಂದ್ರನ್ ಪಾಡಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ ಕುರಿತು ರಚಿಸಿದ ಕೃತಿ, ಸಾಹಿತ್ಯದಲ್ಲಿ ನಡೆಸಿದ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗುವುದು.