ಬದಿಯಡ್ಕ: ರಸ್ತೆ ಬದಿಯಲ್ಲಿ ನಿಂತಿದ್ದ ವೃದ್ದೆಯ ಚಿನ್ನದ ಸರವನ್ನು ಅಪಹರಿಸಿದ ಆರೋಪಿ ಸೆರೆಯಾಗಿದ್ದಾನೆ. ಚೆನ್ನಡ್ಕ ನಿವಾಸಿ ಚಾಲಕ್ಕರ ಹೌಸ್ನ ಇಬ್ರಾಹಿಂ ಖಲೀಲ್ (43)ನನ್ನು ಪಯ್ಯನ್ನೂರು ಸಬ್ ಇನ್ಸ್ಪೆಕ್ಟರ್ ಪಿ. ಯಧು ಕೃಷ್ಣನ್ರ ನೇತೃತ್ವದಲ್ಲಿರುವ ಪ್ರತ್ಯೇಕ ತನಿಖಾ ತಂಡ ಬದಿಯಡ್ಕದಿಂದ ಸೆರೆ ಹಿಡಿದಿದೆ. ಈ ತಿಂಗಳ ೬ರಂದು ಪಯ್ಯನ್ನೂರು ಕೇಳೋತ್ನಲ್ಲಿ ಘಟನೆ ನಡೆದಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಮನೆ ಮುಂಭಾಗದ ರಸ್ತೆಯಲ್ಲಿ ನಿಂತಿದ್ದ ಕಾರ್ತ್ಯಾಯಿನಿಯವರ ಚಿನ್ನದ ಸರವನ್ನು ಆರೋಪಿ ಅಪಹರಿಸಿದ್ದನು. ಸ್ಥಳೀಯ ಸಿಸಿ ಟಿವಿ ಕ್ಯಾಮರಾಗಳ ದೃಶ್ಯ ಗಳು ಹಾಗೂ ಫೋನ್ ಕಾಲ್ಗಳನ್ನು ಪರಿಶೀಲಿಸಿದ ಬಳಿಕ 12 ದಿನಗಳೊ ಳಗೆ ಆರೋಪಿಯನ್ನು ಸೆರೆ ಹಿಡಿಯ ಲಾಗಿದೆ. ವಿದ್ಯಾನಗರ, ಮೇಲ್ಪರಂಬ, ಹೊಸದುರ್ಗ ಠಾಣೆಗಳಲ್ಲಾಗಿ 10ರಷ್ಟು ಮಾಲೆ ಅಪಹರಣ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಇಬ್ರಾಹಿಂ ಖಲೀಲ್. ತನಿಖಾ ತಂಡದಲ್ಲಿ ಪಯ್ಯನ್ನೂರು ಠಾಣೆಯ ಸೀನಿಯರ್ ಸಿಪಿಒಗಳಾದ ಪ್ರಮೋದ್ ಕಡಂಬೇರಿ, ಎ.ಜಿ. ಅಬ್ದುಲ್ ಜಬ್ಬಾರ್, ಸಬ್ ಇನ್ಸ್ಪೆಕ್ಟರ್ ಎ.ಜಿ. ಅಬ್ದುಲ್ ರೌಫ್, ಎಎಸ್ಐ ನೌಫಲ್ ಅಂಜಿಲತ್, ಸ್ಪೆಷಲ್ ಬ್ರಾಂಚ್ ಎಎಸ್ಐ ಕೆ.ವಿ. ಮನೋಜ್ ಒಳಗೊಂಡಿದ್ದಾರೆ.
