ರಸ್ತೆ ಮಧ್ಯ ಅಪಘಾತಕ್ಕೆ ಕಾರಣವಾಗುತ್ತಿರುವ ವಿದ್ಯುತ್ ಕಂಬ ತೆರವಿಗೆ ಆಗ್ರಹ

ಉಪ್ಪಳ: ವಿದ್ಯುತ್ ಕಂಬವೊAದು ರಸ್ತೆ ಮುಧ್ಯದಲ್ಲಿದ್ದು ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸಬಹುದಾಗಿದೆ. ಉಪ್ಪಳ ವಿದ್ಯುತ್ ಇಲಾಖೆ ವ್ಯಾಪ್ತಿಗೊಳಪಡುವ ಹೆದ್ದಾರಿಯಿಂದ ಕೆಲವೇ ಮೀಟರ್ ದೂರದ ನಯಬಜಾರ್‌ನ ಅಂಬಾರು ರಸ್ತೆ ಮಧ್ಯೆ ಈ ವಿದ್ಯುತ್ ಕಂಬವಿದೆ. ಈ ಹಿಂದೆ ಬದಿಯಲ್ಲಿದ್ದ ವಿದ್ಯುತ್ ಕಂಬ ರಸ್ತೆ ಅಗಲಗೊಳಿಸಿದಾಗ ಕಂಬವನ್ನು ತೆರವುಗೊಳಿಸದ ಕಾರಣ ಈಗ ರಸ್ತೆಯ ಮಧ್ಯ ಭಾಗಕ್ಕೆ ತಲುಪಿದೆ. ಹಲವು ಭಾರಿ ತೆರವುಗೊಳಿಸಲು ತಿಳಿಸಿದರೂ ಕ್ರಮಕ್ಕೆ ಮುಂದಾಗಲಿಲ್ಲವೆAದು ಸ್ಥಳಿಯರು ತಿಳಿಸಿದ್ದಾರೆ. ಈ ರಸ್ತೆಯಿಂದ ಅಂಬಾರು, ಚೆರುಗೋಳಿ, ಸೋಂಕಾಲು, ಪ್ರತಾಪನಗರಕ್ಕೆ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಅಲ್ಲದೆ ಈ ಪರಿಸರದಲ್ಲಿ ಅಗ್ನಿ ಶಾಮಕ ಕೇಂದ್ರ ಕಾಯÁðಚರಿಸುತ್ತಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿರುವುದಾಗಿ ದೂರಲಾಗಿದೆ. ಅಪಘಾತಕ್ಕೀಡಾಗಿ ಕಂಬ ಮುರಿದು ಬಿದ್ದಲ್ಲಿ ದುರಂತ ಸಂಭವಿಸಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಬAಧಪಟ್ಟ ವಿದ್ಯುತ್ ಇಲಾಖೆ ಕಂಬವನ್ನು ಮಧ್ಯಭಾಗದಿಂದ ತೆರವುಗೊಳಿಸಿ ಬದಿಯಲ್ಲಿ ಸ್ಥಾಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page