ರಾಜ್ಯ ಶಾಲಾ ಕಲೋತ್ಸವ ಜನವರಿಯಲ್ಲಿ

ತಿರುವನಂತಪುರ:  ರಾಜ್ಯ ಶಾಲಾ ಕಲೋತ್ಸವವನ್ನು ಜನವರಿಗೆ ಮುಂದೂಡಲಾಗಿದೆ. ಡಿಸೆಂಬರ್ 3ರಿಂದ 7ರ ವರೆಗೆ ತಿರುವನಂತಪುರ ದಲ್ಲಿ ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಡಿಸೆಂಬರ್ ೪ರಂದು ನೇಶನಲ್ ಅಚ್ಚೀವ್‌ಮೆಂಟ್ ಸರ್ವೇ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಕಲೋತ್ಸವ ಮುಂದೂಡಲು ನಿರ್ಧರಿಸಲಾಗಿದೆ. ಅರ್ಧವಾರ್ಷಿಕ ಪರೀಕ್ಷೆ ಡಿಸೆಂಬರ್ 12ರಿಂದ 20ರ ವರೆಗೆ ನಡೆಯಲಿದೆ. 21ರಿಂದ 29ರ ವರೆಗೆ ಕ್ರಿಸ್ಮಸ್ ರಜೆಯಾಗಿರುವುದು. ಈ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರ ಕಲೋತ್ಸವ ನಡೆಸುವುದಾಗಿ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ. ಶಾಲಾ ಮಟ್ಟದ ಕಲೋತ್ಸವಗಳು ಈ ತಿಂಗಳ 15, ಉಪ ಜಿಲ್ಲಾ ಕಲೋತ್ಸವ ನವಂಬರ್ 10, ಜಿಲ್ಲಾ ಕಲೋತ್ಸವ ಡಿಸೆಂಬರ್ ೩ರೊಳಗೆ ಪೂರ್ತಿಗೊಳಿಸಬೇಕಾಗಿದೆ.

Leave a Reply

Your email address will not be published. Required fields are marked *

You cannot copy content of this page