ರಾಜ್ಯದ ಯುವ ಸಮೂಹದ ಪಲಾಯನ ಪಿಣರಾಯಿ ಸರಕಾರದ 9 ವರ್ಷದ ಸಾಧನೆ- ಎಂ.ಎಲ್. ಅಶ್ವಿನಿ

ಮುಳ್ಳೇರಿಯ: ಶಿಕ್ಷಣ, ಉದ್ಯೋಗ, ಉತ್ತಮ ಜೀವನ ಸನ್ನಿವೇಶಗಳನ್ನು ಹುಡುಕುತ್ತಾ ರಾಜ್ಯದಿಂದ ಇತರ ದೇಶಗಳಿಗೆ ಯುವಜನಾಂಗ ಪಲಾಯನಗೈಯ್ಯುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಅಪಾಯಕರವಾದ ಈ ಸನ್ನಿವೇಶ ಪಿಣರಾಯಿ ವಿಜಯನ್ ಸರಕಾರದ ೯ ವರ್ಷದ ಆಡಳಿತ ಸಾಧನೆ ಎಂದು ಅವರು ಅಪಹಾಸ್ಯ ವ್ಯಕ್ತಪಡಿಸಿದರು. ಬಿಜೆಪಿ ಕಾರಡ್ಕ ಪಂಚಾಯತ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯಾಡಳಿತ ಸಂಸ್ಥೆಗಿರುವ ಯೋಜನೆ ವಿನಿಯೋಗ ಮೊತ್ತವನ್ನು ಪಿಣರಾಯಿ ಸರಕಾರ ಕಡಿತಗೊಳಿಸಿದೆ. ದುಂದುವೆಚ್ಚ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಹಲವಾರು ಜನಕ್ಷೇಮ ಯೋಜನೆಗಳು, ಅಭಿವೃದ್ಧಿ ಯೋಜನೆಗಳ ತಾಳ ತಪ್ಪಿದೆ. ನರೇಂದ್ರ ಮೋದಿ ಸರಕಾರ ಆವಿಷ್ಕರಿಸಿ ಜ್ಯಾರಿಗೊಳಿಸಿದ ಆಯುಷ್ಮಾನ್ ಭಾರತ್, ವಯೋಜನ ಇನ್ಶೂರೆನ್ಸ್ ಮೊದಲಾದ ಜನಕ್ಷೇಮ ಯೋಜನೆಗಳನ್ನು ಜ್ಯಾರಿ ಗೊಳಿಸದಿರುವುದರಲ್ಲಿ ಪಿಣರಾಯಿ ವಿಜಯನ್ ಸರಕಾರ ಜನರಲ್ಲಿ ಉತ್ತರ ಹೇಳಬೇಕಾಗಿ ಬರಲಿದೆ ಎಂದು ಅಶ್ವಿನಿ ನೆನಪಿಸಿದರು. ಕೆ. ವಸಂತ ಅಧ್ಯಕ್ಷತೆ ವಹಿಸಿದರು. ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಜಿಲ್ಲಾ ಉಪಾಧ್ಯಕ್ಷೆ ಎಂ. ಜನನಿ, ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್, ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ, ಮಂಡಲ ಮಾಜಿ ಅಧ್ಯಕ್ಷ ಹರೀಶ್ ನಾರಂಪಾಡಿ ಮಾತನಾಡಿದರು.

RELATED NEWS

You cannot copy contents of this page