ರಾಜ್ಯದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ತೀರ್ಮಾನ: ಚೀಮೇನಿಯಲ್ಲಿ ಸ್ಥಳ ಪರಿಶೀಲನೆ
ಕಾಸರಗೋಡು: ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ವಿದ್ಯುನ್ಮಂಡಳಿ ಮುಂದಾಗಿದೆ. ಇದರಂತೆ ರಾಜ್ಯದಲ್ಲಿ ಇದೇ ಮೊದಲು ಎಂಬಂತೆ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಮಂಡಳಿ ತೀರ್ಮಾನಿಸಿದೆ. ಆ ಮೂಲಕ 220 ಮೆಘಾವಾಟ್‌ನ ತಲಾ ಎರಡು ಸೇರಿದಂತೆ ಒಟ್ಟು 440 ಮೆಘಾವಾಟ್ ವಿದ್ಯುತ್ ಉತ್ಪಾದಿಸುವ ಅಣು ವಿದ್ಯುತ್ ಸ್ಥಾವರ ನಿರ್ಮಿಸುವ ಯೋಜನೆ ಹಾಕಿ ಕೊಳ್ಳಲಾಗಿದೆ. ಇದಕ್ಕಾಗಿ ಕಾಸರಗೋಡು ಜಿಲ್ಲೆಯ ಚೀಮೇನಿ ಮಾತ್ರವಲ್ಲದೆ ಆದಿರಾಪಳ್ಳಿಯಲ್ಲಿ ವಿದ್ಯುನ್ಮಂಡಳಿ ಸ್ಥಳ ಪರಿಶೀಲನೆ ಆರಂಭಿಸಿದೆ. ಇದರ ಹೊರತಾಗಿ ಪೆರಿಂಜಾಮ್ ಪ್ರದೇಶ ವನ್ನೂ ಇದಕ್ಕಾಗಿ ಪರಿಶೀಲಿಸಲಾಗುತ್ತಿದೆ.
ರಾಜ್ಯದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ರಾಜ್ಯ ವಿದ್ಯುನ್ಮಂಡಳಿ ಮಾತ್ರವಲ್ಲ ಇಂಧನ ಇಲಾಖೆಯೂ ಅಗತ್ಯದ ಯತ್ನದಲ್ಲಿ ಈಗಲೇ ತೊಡ ಗಿದೆ. ಇದರಂತೆ ರಾಜ್ಯ ವಿದ್ಯುನ್ಮಂಡಳಿ (ಕೆಎಸ್‌ಇಬಿ) ಅಧ್ಯಕ್ಷರನ್ನೊಳಗೊಂಡ ನಿಯೋಗ ಜುಲೈ 15ರಂದು ಮುಂಬೈಗೆ ಸಾಗಲಿಲ್ಲ. ನ್ಯೂಕ್ಲಿಯರ್ ಪವರ್ ಕಾರ್ಪರೇಷನ್‌ನ ಸಂಬಂಧಪಟ್ಟವರೊಂ ದಿಗೆ ಪ್ರಥಮ ಹಂತದ ಚರ್ಚೆಯನ್ನು ನಡೆಸಿದೆ. ಇದು ಮಾತ್ರವಲ್ಲದೆ, ನ್ಯೂಕ್ಲಿಯರ್ ಪವರ್ ಕಾರ್ಪರೇಷನ್‌ನ ಆಶ್ರಯದಲ್ಲಿ ಕಾರ್ಯವೆಸಗುತ್ತಿರುವ ಭಾರತೀಯ ನಾಬಿಕಿಯ ವಿದ್ಯುತ್ ನಿಗಮ ಲಿಮಿಟೆಡ್ (ಬಾವಿನಿ)ಯ ನಿರ್ದೇಶಕರೊಂದಿಗೆ ರಾಜ್ಯ ಇಂಧನ ಇಲಾಖೆಯ ಹೊಣೆಗಾರಿಕೆ ಹೊಂದಿ ರುವ ರಾಜ್ಯ ಸರಕಾರದ ಹೆಚ್ಚುವರಿ ಕಾರ್ಯದರ್ಶಿ ನಾಳೆ ವೀಡಿಯೋ ಕಾನ್ಫರೆನ್ಸ್ ಮೂಲಕ ದ್ವಿತೀಯ ಹಂತದ ಚರ್ಚೆ ನಡೆಸುವರು. ಕಲ್ಪಕಂ ಅಣು ವಿದ್ಯುತ್ ಸ್ಥಾವರ ’ಬಾವಿನಿ’ಯೇ ಸ್ಥಾಪಿಸಿದೆ.
ಇದು ಒಟ್ಟು 7000 ಕೋಟಿ ರೂ. ವೆಚ್ಚ ತಗಲುವ ಯೋಜನೆಯಾಗಿದೆ. ಇದರಲ್ಲಿ ಶೇ. 60ರಷ್ಟು ಮೊತ್ತವನ್ನು ಕೇಂದ್ರ ಸರಕಾರ ಅನುದಾನರೂಪದಲ್ಲಿ ನೀಡಬೇಕೆಂಬ ಬೇಡಿಕೆಯನ್ನು ಮುಂಬೈ ಯಲ್ಲಿ ಪವರ್ ಕಾರ್ಪರೇಷನ್ ಆಫ್ ಇಂಡಿಯಾದ ಇಬ್ಬರು ನಿರ್ದೇಶಕರೊಂ ದಿಗೆ ನಡೆಸಿದ ಚರ್ಚೆಯಲ್ಲಿ ನಾವು ಮುಂದಿರಿಸಿರುವುದಾಗಿ ರಾಜ್ಯ ವಿದ್ಯುನ್ಮಂ ಡಳಿ ಅಧ್ಯಕ್ಷ ಬಿಜು ಪ್ರಭಾಕರನ್ ತಿಳಿಸಿದ್ದಾರೆ. ರಾಜ್ಯದಲ್ಲಿ ಜ್ಯಾರಿಯಲ್ಲಿರುವ ವಿವಿಧ ವಿದ್ಯುತ್ ಯೋಜನೆಗಳ ಮೂಲಕ ಒಟ್ಟು 3200 ಮೆಘಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿತ್ತಾದರೂ, ಅದರಲ್ಲಿ ಈಗ 1800 ಮೆಘಾವ್ಯಾಟ್ ವಿದ್ಯುತ್ ಮಾತ್ರವೇ ಉತ್ಪಾದಿಸಲಾಗುತ್ತಿದೆ.
2030ರ ವೇಳೆ ರಾಜ್ಯದ ವಿದ್ಯುತ್ ಉಪಯೋಗ 10000 ಮೆಘಾವ್ಯಾಟ್‌ಗೇರುವ ಸಾಧ್ಯತೆ ಇದೆ.