ರಾಜ್ಯದಲ್ಲಿ ಆರ್ಥಿಕ ಸಂದಿಗ್ಧತೆ: ಟ್ರಷರಿ ನಿಯಂತ್ರಣ

ತಿರುವನಂತಪುರ: ರಾಜ್ಯದಲ್ಲಿ ಆರ್ಥಿಕ ಸಂದಿಗ್ಧತೆ ಮತ್ತೆ ಅತಿ ತೀವ್ರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಸರಕಾರ ಟ್ರಷರಿ ನಿಯಂತ್ರಣ ಹೇರಿದೆ. ೫ ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ  ಬಿಲ್ ಗಳನ್ನು ಇನ್ನೊಂದು ಸೂಚನೆ ಲಭಿಸುವವರೆಗೆ ಬದಲಾಯಿಸುವಂತಿಲ್ಲ.  ಸ್ಥಳೀಯಾ ಡಳಿತ ಸಂಸ್ಥೆಗಳು ಹಾಗೂ ಗುತ್ತಿಗೆದಾ ರರಿಗೆ ಟ್ರಷರಿ ನಿಯಂತ್ರಣ ಬಾಧಿಸ ಲಿದೆ. ವಿವಿಧ ಇಲಾಖೆಗಳ ಸೌಲಭ್ಯ ಗಳ ವಿತರಣೆಗೂ ವಿಳಂಬವಾಗಲಿದೆ.  ಓಣಂ ಹಬ್ಬದ ಖರ್ಚುಗಳ ಬೆನ್ನಲ್ಲೇ ರಾಜ್ಯದಲ್ಲಿ ಆರ್ಥಿಕ ಸಂದಿಗ್ಧತೆ  ತೀವ್ರಗೊಂಡಿದೆ.

You cannot copy contents of this page