ರಾಜ್ಯಪಾಲ ಸೇವಾ ಅವಧಿ ಸೆಪ್ಟಂಬರ್ನಲ್ಲಿ ಮುಕ್ತಾಯ: ಆರೀಫ್ ಮೊಹಮ್ಮದ್ ಖಾನ್ ಲೋಕಸಭೆಗೆ ಸ್ಪರ್ಧೆ ಸಾಧ್ಯತೆ
ತಿರುವನಂತಪುರ: ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ತಮ್ಮ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಭಾರತ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಉತ್ತರ ಪ್ರದೇಶದ ಬುಲಂದ್ ಶಹರ್ ನಿವಾಸಿಯಾಗಿರುವ ಆರೀಫ್ ಮೊಹಮ್ಮದ್ ಖಾನ್ ಅವರು ಕೇರಳದ ೨೨ನೇ ರಾಜ್ಯಪಾಲರಾಗಿ ೨೦೧೯ ಸೆಪ್ಟಂಬರ್ ತಿಂಗಳಲ್ಲಿ ಅಧಿಕಾರ ವಹಿಸಿ ಕೊಂಡಿದ್ದರು. ಐದು ವರ್ಷಗಳ ಸೇವಾ ಅವಧಿ ಸೆಪ್ಟಂಬರ್ ತಿಂಗಳಲ್ಲಿ ಕೊನೆಗೊಳ್ಳಲಿದೆ. ಅದರೊಳಗಾಗಿ ಅವರು ತಮ್ಮ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆಂಬ ರೀತಿಯ ರಾಜಕೀಯ ಸುದ್ದಿಗಳು ಈಗ ಹರಡತೊಡಗಿವೆ. ಹೌದು ಚುನಾವಣೆ ಯಲ್ಲಿ ಆರೀಫ್ ಮೊಹಮ್ಮದ್ ಖಾನ್ ಗೆದ್ದಲ್ಲಿ ಮೋದಿ ಸರಕಾರ ಕೇಂದ್ರದಲ್ಲಿ ಮೂರನೇ ಬಾರೀ ಅಧಿಕಾರಕ್ಕೇರಿದಲ್ಲಿ ಆ ಹೊಸ ಸಚಿವ ಸಂಪುಟದಲ್ಲಿ ಆರೀಫ್ ಮೊಹಮ್ಮದ್ ಖಾನ್ ಸಚಿವರಾಗುವ ದಿನ ಖಂಡಿತವೆಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ. ೭೩ರ ಹರೆಯದ ಆರೀಫ್ ಮೊಹಮ್ಮದ್ ಖಾನ್ ಅವರನ್ನು ಈ ಹಿಂದೆ ಉಪರಾಷ್ಟ್ರಪತಿ ಚುನಾವಣೆ ವೇಳೆ ಎನ್ಡಿಎ ಉಮೇ ದ್ವಾರರಾಗುವ ಸಾಧ್ಯತೆಯೂ ಇತ್ತು. ಆದರೆ ಕೊನೆ ಗಳಿಗೆಯಲ್ಲಿ ಜಗದೀಪ್ ಧನ್ಕರ್ರಿಗೆ ಉಪರಾಷ್ಟ್ರಪತಿಯಾಗುವ ಯೋಗ ಒಲಿದು ಬಂದಿತ್ತು.
ಆರೀಫ್ ಮೊಹಮ್ಮದ್ ಖಾನ್ ೨೦೦೪ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿ ದ್ದರು. ಅವರು ಅನೇಕ ವರ್ಷಗಳಿಂದ ಆರ್ಎಸ್ಎಸ್ನೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಹಲವು ಉನ್ನತ ನೇತಾರ ಆಪ್ತರೂ ಆಗಿ ರುವ ಆರೀಫ್ ಮೊಹಮ್ಮದ್ ಖಾನ್ ಬಿಜೆಪಿಯ ಹಿಂದುತ್ವ ನಿಲುವನ್ನು ಅಂಗೀಕರಿಸುವ ನೇತಾರರೂ ಆಗಿದ್ದಾರೆ.