ರಾಜ್ಯಪಾಲರ ವಿರುದ್ಧ ಪ್ರತಿಭಟನೆ: ಎಸ್‌ಎಫ್‌ಐ ಕಾರ್ಯಕರ್ತರ ಜಾಮೀನು ಅರ್ಜಿ ವಜಾ
ತಿರುವನಂತಪುರ: ತಿರುವನಂ ತಪುರದಲ್ಲಿ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಅವರ ವಿರುದ್ಧ ಕಪ್ಪು ಪತಾಕೆ ಪ್ರದರ್ಶಿಸಿ ಅವರ ವಾಹನವನ್ನು ತಡೆದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂ ಗ ಬಂಧನಕ್ಕೊಳಗಾದ ಆರೋಪಿಗ ಳಾದ ಎಸ್‌ಎಫ್‌ಐ ಕಾರ್ಯಕರ್ತರು ಜಾಮೀನು ಕೋರಿ ಸಲ್ಲಿಸಿದ ಅರ್ಜಿಗಳನ್ನು ತಿರುವನಂತಪುರ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ವಜಾಗೈದು, ಅವರಿಗೆ ಜಾಮೀನು ನಿರಾಕರಿಸಿದೆ.
ಎಸ್‌ಎಫ್‌ಐ ಕಾರ್ಯಕರ್ತ ರಾದ ಯದುಕೃಷ್ಣನ್, ಆಶಿಕ್ ಪ್ರದೀಪ್, ಆರ್.ಜಿ. ಆಶಿಕ್, ದಿಲೀ ಪ್, ರಯಾನ್, ರಿನೋ ಸ್ಟೀಫನ್, ಅಮಲ್ ಎಂಬವರು ಈ ಪ್ರಕರಣದ ಆರೋಪಿಗಳಾಗಿದ್ದು ಅವರಿಗೆ ನ್ಯಾ ಯಾಲಯ ಜಾಮೀನು ನಿರಾಕರಿಸಿ ದೆ. ಇದೇ ಪ್ರಕರಣದ ಇನ್ನೋರ್ವ ಆರೋಪಿಗೆ ಕಾನೂನು ಕಾಲೇಜಿನಲ್ಲಿ ಪರೀಕ್ಷೆಗೆ ಬರೆಯಲು ನ್ಯಾಯಾಲಯ ಈ ಹಿಂದೆ ಜಾಮೀನು ಮಂಜೂರುಮಾಡಿತ್ತು. ಪರೀಕ್ಷೆ ಕಳೆದ ಬಳಿಕ ಆತನ ಜಾಮೀನನ್ನೂ ನ್ಯಾಯಾಲಯ ರದ್ದುಪಡಿಸಿದೆ.
ಆರೋಪಿಗಳ ವಿರುದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟುಮಾಡಿದ ಸಾಧಾರಣ ಪ್ರಕರಣನ್ನು ಮಾತ್ರವೇ ಮೊದಲು ಪೊಲೀಸರು ದಾಖಲಿಸಿಕೊಂಡಿದ್ದರು. ಪೊಲೀಸರ ಅಂತಹ ಕ್ರಮಕ್ಕೆ ರಾಜ್ಯಪಾಲರು ಗರಂಗೊಂಡಿದ್ದರು. ಮಾತ್ರವಲ್ಲ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ನ ೧೨೪ರ ಪ್ರಕಾರ ಪ್ರಕರಣ ದಾಖಲಿ ಸುವಂತೆ ರಾಜ್‌ಭವನ್ ನಂತರ ರಾಜ್ಯ ಸರಕಾರಕ್ಕೆ ಪತ್ರದ ಮೂಲಕ ತಿಳಿಸಿತ್ತು. ಅದರಂತೆ ಪೊಲೀಸರು ಆರೋಪಿಗಳ ವಿರದ್ಧ ಸೆಕ್ಷನ್ ೧೨೪ರ ಪ್ರಕಾರವಿರುವ ಆರೋಪವನ್ನು ಹೇರಿದ್ದರು. ಇದು ಜಾಮೀನು ರಹಿತ ಸೆಕ್ಷನ್ ಆಗಿದೆ. ಈ ಪ್ರಕರಣದಲ್ಲಿ ಸೆಕ್ಷನ್ ೧೨೪ ನೆಲೆಗೊಳ್ಳದೆಂದು ಪ್ರೊಸಿಕ್ಯೂಶನ್ ನ್ಯಾಯಾಲಯದಲ್ಲಿ ವಾದಿಸಿದ್ದು ಅದನ್ನು ನ್ಯಾಯಾಲಯ ತಿರಸ್ಕರಿಸಿದೆ.