ರಾಮಮಂದಿರ ಉದ್ಘಾಟನೆ ದಿನವೇ ನಿಜವಾದ ಸ್ವಾತಂತ್ರ್ಯ-ಭಾಗವತ್

ಇಂದೋರು: ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಯಾದ ದಿನವನ್ನು ಪ್ರತಿಷ್ಠಾ ದ್ವಾದಶಿ ಎಂದು ಆಚರಿಸಿದ ದಿನವೇ ಭಾರತದ ನೈಜ ಸ್ವಾತಂತ್ರ್ಯ ದಿನವಾಗಿದೆಯೆಂದು  ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಇಂದೋರ್‌ನಲ್ಲಿ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ  ಚಂಪತ್ ರೈ ಅವರಿಗೆ ರಾಷ್ಟ್ರೀಯ ದೇವ ಅಹಲ್ಯಾ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮೋಹನ್ ಭಾಗವತ್ ಮಾತನಾಡುತ್ತಿ ದ್ದರು. ಹಲವು ಶತಮಾನಗಳ ಶತ್ರುದಾಳಿ ಎದುರಿಸಿದ ಭಾರತಕ್ಕೆ ಶ್ರೀರಾಮ ಮಂದಿರದ ಉದ್ಘಾಟನೆ ನಂತರ ನಿಜವಾದ ಸ್ವಾತಂತ್ರ್ಯ ದೊರೆದಿದೆ. ರಾಮ ಮಂದಿರ ಆಂದೋಲನವನ್ನು ಭಾರತವನ್ನ್ಲು ಜಾಗ್ರತಗೊಳಿಸತೊಡಗಿದೆ. ಇದರಿಂದ ದೇಶ ತನ್ನ ಸ್ವಸಾಮರ್ಥ್ಯದ ಮೇಲೆ ನಿಂತು ಜಗತ್ತಿಗೆ ದಾರಿ ತೋರಿಸಬಹುದು ಎಂದರು.

ಈ ದಿನವನ್ನು ಪ್ರತಿಷ್ಠಾ ದ್ವಾದಶಿ ಎಂದು ಆರಂಭಿಸಬೇಕು. ಇದು ಶತಮಾನದ ಪರಚಕ್ರ (ಬಾಹ್ಯ ಅಕ್ರಮ) ನಂತರದ  ಭಾರತದ ಸಾರ್ವಭೌಮತ್ವದ ಸ್ಥಾಪನೆಯನ್ನು ಸೂಚಿಸುತ್ತಿದೆ. ರಾಮಮಂದಿರ ಆಂದೋಲನವು ಯಾರನ್ನೂ ವಿರೋಧಿಸಲು ಅಲ್ಲ. ಭಾರತವನ್ನು ಜಾಗ್ರತಗೊಳಿಸುವ ಪ್ರಯತ್ನವಾಗಿದೆ. ಇದರಿಂದಾಗಿ ಭಾರತ ಸ್ವತಂತ್ರವಾಗಿ ನಿಂತು ಜಗತ್ತಿಗೆ ಮಾರ್ಗದಶನ ನೀಡಬೇಕು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

You cannot copy content of this page