ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ  ಹೊಸದುರ್ಗ  ಪೊಲೀಸ್‌ಗೆ ಚಿನ್ನದ ಪದಕ

ಹೊಸದುರ್ಗ: ಹೊಸದುರ್ಗ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಎಂ.ಟಿ.ಪಿ ಸೈಫುದ್ದೀನ್‌ರಿಗೆ ಕರ್ನಾಟಕದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಲಭಿಸಿದೆ. ೫೦ ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ಚಿನ್ನ, ೫೦ ಮೀಟರ್ ಪ್ರೀ ಸ್ಟೈಲ್‌ನಲ್ಲಿ ಬೆಳ್ಳಿ, ೫೦ ಮೀಟರ್ ಬಟರ್ ಫ್ಲೈಯಲ್ಲಿ  ಕಂಚಿನ ಪದಕ ಇವರಿಗೆ ಲಭಿಸಿದೆ. ಮಾಜಿ ಇಂಟರ್ ನೇಶನಲ್ ಈಜು ಪಟುವಾದ ಇವರು  ಹಲವೆಡೆಗಳಲ್ಲಿ  ಈಜು ತರಬೇತಿ ನೀಡುತ್ತಿದ್ದಾರೆ.

You cannot copy contents of this page