ರಾಷ್ಟ್ರೀಯ ತಂಡಕ್ಕೆ ಆಯ್ಕೆ: ಕಾಂಗ್ರೆಸ್ ಅಭಿನಂದನೆ

ಬಾಯಾರು: ಪೈವಳಿಕೆ ಪಂಚಾಯತ್‌ನ ಕನಿಯಾಲ ನಿವಾಸಿ ಸುಂದರ- ಕಮಲ ದಂಪತಿ ಪುತ್ರಿ ಪದವಿ ವಿದ್ಯಾರ್ಥಿನಿ ಶ್ರಾವ್ಯ ಸಿ.ಎಚ್. ಭಾರತೀಯ ಸಾಫ್ಟ್‌ಬೇಸ್ ಬಾಲ್ ತಂಡಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಸಮಿತಿ, ಮಂಡಲ ಸಮಿತಿ, ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಈಕೆಯನ್ನು ಅಭಿನಂದಿಸಲಾಯಿತು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಕುಮಾರ್, ನವಾಜ್ ಕನಿಯಾಲ ಇವರು ಮನೆಗೆ ಭೇಟಿ ನೀಡಿ ಶ್ರಾವ್ಯರನ್ನು ಗೌರವಿಸಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರದೀಪ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕಾರ್ತಿಕೇಯನ್, ಯುವ ಕಾಂಗ್ರೆಸ್ ಬ್ಲೋಕ್ ಅಧ್ಯಕ್ಷ ಜುನೈದ್ ಉರ್ಮಿ, ಮಂಡಲ ಕಾಂಗ್ರೆಸ್ ಪದಾಧಿಕಾರಿಗಳಾದ ಶಿವರಾಮ  ಶೆಟ್ಟಿ, ಗಂಗಾಧರ ನಾಯ್ಕ್, ರಜಾಕ್ ಚೇರಾಲ್, ಸುಂದರ ಸುದೆಂಬಳ, ಆದಬ್ ಕನಿಯಾಲ, ಸಾದಿಕ್, ಲತೀಫ್ ಉಪಸ್ಥಿತರಿದ್ದರು.

RELATED NEWS

You cannot copy contents of this page