ರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಕಾಸರಗೋಡಿನ ಇಬ್ಬರು ವಿದ್ಯಾರ್ಥಿಗಳು
ಚೆರ್ಕಳ: ನಾಳೆಯಿಂದ 31ರವರೆಗೆ ಹರ್ಯಾಣ ಸೋನಿಪ್ಪಾಟ್‌ನಲ್ಲಿ ಜರಗಲಿರುವ 51ನೇ ರಾಷ್ಟ್ರೀ ಯ ವೈಜ್ಞಾನಿಕ ಪ್ರದರ್ಶನ ಕಾರ್ಯಕ್ರಮದಲ್ಲಿ ಕೇರಳವನ್ನು ಪ್ರತಿನಿಧಿಕರಿಸಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಚೆರ್ಕಳ ಸೆಂಟ್ರಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಅಹಮ್ಮದ್ ನಿಬ್ರಾಸ್, ಮುಹಮ್ಮದ್ ಶಾಮಿನ್ ಸ್ಪರ್ಧೆಯಲ್ಲಿ ಭಾಗವಹಿಸುವವರು. ಕಳೆದ ಜನವರಿಯಲ್ಲಿ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದ ದಕ್ಷಿಣ ಭಾರತ ಸಯನ್ಸ್ ಫೇರ್‌ನಲ್ಲಿ ಇಬ್ಬರು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದು, ಇದರಿಂದ ಇವರನ್ನು ಆಯ್ಕೆ ಮಾಡಲಾಗಿತ್ತು. ಇವರಿಬ್ಬರು ಸ್ವಂತವಾಗಿ ಅಭಿವೃದ್ಧಿಪಡಿಸಿದ ನೋಲ್ವಾಸ್ ಫೈವ್ ಇನ್ ವನ್ ಟ್ರಕ್ ಎಂಬ ವರ್ಕಿಂಗ್ ಮೋಡೆಲ್ ಟ್ರಾನ್ಸ್‌ಪೋರ್ಟ್ ಆಂಡ್ ಕಮ್ಯೂನಿಕೇಶನ್ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ. ಇವರಿಗೆ ಶಾಲಾ ಪಿಟಿಎ ಪೂರ್ಣ ಬೆಂಬಲ ನೀಡಿದೆ.