ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಬದಿಯ ಕಾಲುದಾರಿಗೆ ಕಟ್ಟಡಗಳು ವಿಘ್ನ: ಜನರಿಗೆ ಆತಂಕ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿ ಭೂಮಿ ಸರಿಯಾಗಿ ವಶಪಡಿಸಿದ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ, ಅದಕ್ಕೆ ಹೊಂದಿಕೊಂಡು ಸರ್ವೀಸ್ ರಸ್ತೆ, ಚರಂಡಿ ವ್ಯವಸ್ಥೆ, ಕಾಲುದಾರಿ ಸಿದ್ಧವಾಗುವಾಗ ಕೆಲವು ಕಡೆಗಳಲ್ಲಿ ಕಾರುದಾರಿಗೆ ಸ್ಥಳವಿಲ್ಲದೆ ಕೆಲವು ಕಡೆಗಳಲ್ಲಿ ಕಾಲು ದಾರಿ ನಿರ್ಮಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ. ಕಾಲ್ನಡೆ ಪ್ರಯಾಣಿಕರ ಸುರಕ್ಷತೆಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲ್ನಡೆ ನಿರ್ಮಾಣ ವಿಷಯದಲ್ಲಿ ಹೈಕೋರ್ಟ್ ಮಧ್ಯ ಪ್ರವೇಶಿಸಿ ಈ ಮೊದಲೇ ನಿರ್ಮಾಣ ಕಂಪೆನಿಗಳಿಗೆ ನಿರ್ದೇಶ ನೀಡಿತ್ತು. ಕಾಲುದಾರಿ ನಿರ್ಮಾಣದ ವಿಳಂಬ ನೀತಿ, ಅಸಡ್ಡೆಯನ್ನು ಈಗ ಜನರು ಚರ್ಚಿಸುತ್ತಿದ್ದಾರೆ.

ಸರ್ವೀಸ್ ರಸ್ತೆ ಬದಿಯ ವ್ಯಾಪಾರ ಸಂಸ್ಥೆಗಳು, ಕಟ್ಟಡಗಳು, ಮನೆಗಳು ಹಲವು ಭಾಗಗಳಲ್ಲಿ ಕಾಲುದಾರಿಗೆ ವಿಘ್ನವಾಗಿ ನೆಲೆಗೊಂಡಿದೆ. ವಶಪಡಿಸಿದ ಭೂಮಿಯಲ್ಲಿ ಕಡಿಮೆಯಾಗಿದೆಯೋ ಎಂಬ ಬಗ್ಗೆ ಸಂಬಂಧಪಟ್ಟವರು ವಿವರಿಸಬೇಕಾಗಿದೆ. 2 ಮೀಟರ್ (6 ಅಡಿ) ಅಗಲದಲ್ಲಿ ಕಾಲುದಾರಿ ಸಿದ್ಧಪಡಿಸಬೇಕಾಗಿದೆ. ನಿರ್ಮಾಣ ಪೂರ್ತಿಗೊಂಡ ಸ್ಥಳಗಳಲ್ಲಿ ಕೂಡಾ ಕಾಲುದಾರಿಗೆ 6 ಅಡಿ ಅಗಲವಿಲ್ಲ. ಕೆಲವು ಕಡೆಗಳಲ್ಲಿ ಕಾಲುದಾರಿ ನಿರ್ಮಿಸಬೇಕಾದ ಸ್ಥಳದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಇರುವುದರಿಂದ ಕಾಲುದಾರಿ ನಿರ್ಮಾಣಕ್ಕೆ ತಡೆಯಾಗು ತ್ತಿದೆ. ವಿದ್ಯುತ್ ಪೋಸ್ಟ್‌ಗಳನ್ನು ಬದಿಗೆ ಸ್ಥಾಪಿಸಲು ಸ್ಥಳ ಸೌಕರ್ಯವೂ ಇಲ್ಲ. ಈ ಮಧ್ಯೆ ಕಾಲುದಾರಿ ನಿರ್ಮಾಣ ವಿಷಯದಲ್ಲಿ ಕಟ್ಟಡ ಮಾಲಕರು ಹಾಗೂ ನಿರ್ಮಾಣ ಕಂಪೆನಿಗಳ ಮಧ್ಯೆ ಅನಧಿಕೃತವಾಗಿ ಒಪ್ಪಂದ ಏರ್ಪಟ್ಟಿರು ವುದಾಗಿಯೂ ಆರೋಪ ಮೂಡಿ ಬಂದಿದೆ. ಈ ಬಗ್ಗೆ ತನಿಖೆ ನಡೆಸಬೇ ಕೆಂಬ ಬೇಡಿಕೆಯೂ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

You cannot copy content of this page