ರಿಯಾಸ್ ಮೌಲವಿ ಕೊಲೆ ಪ್ರಕರಣ: ತೀರ್ಪು ದಿನಾಂಕ ಅ. ೨೭ರಂದು
ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಭೀತಿ ಸೃಷ್ಟಿಸಿದ್ದ ಕಾಸರ ಗೋಡು ಹಳೆ ಸೂರ್ಲಿನ ಮದ್ರಸಾ ಅಧ್ಯಾಪಕ, ಮೂಲತಃ ಕರ್ನಾಟಕದ ಕೊಡಗು ನಿವಾಸಿ ಮೊಹಮ್ಮದ್ ರಿಯಾಸ್ ಮೌಲವಿ (೨೮)ಯ ವರನ್ನು ಕೊಲೆಗೈದ ಪ್ರಕರಣದ ವಿಚಾರಣೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಪೂರ್ಣಗೊಂಡಿದ್ದು, ತೀರ್ಪಿನ ದಿನಾಂಕವನ್ನು ಈತಿಂಗಳ ೨೭ರಂದು ನ್ಯಾಯಾಲಯ ಪ್ರಕಟಿಸಲಿದೆ.
೨೦೧೭ ಮಾರ್ಚ್ ೨೧ರಂದು ಮುಂಜಾನೆ ಮೊಹಮ್ಮದ್ ರಿಯಾಸ್ ಮೌಲವಿಯವರನ್ನು ಹಲೆ ಸೂರ್ಲಿನ ಅವರ ವಾಸಕೇಂದ್ರದೊಳಗೆ ಇರಿದು ಬರ್ಭರವಾಗಿ ಕೊಲೆಗೈಯ್ಯಲಾಗಿತ್ತು.
ಕೇಳುಗುಡ್ಡೆ ಅಯ್ಯಪ್ಪ ಭಜನಾ ಮಂದಿರ ಬಳಿಯ ಅಜೀಶ್, ಕೇಳು ಗುಡ್ಡೆಯ ನಿತಿನ್ ಮತ್ತು ಕೇಳುಗುಡ್ಡೆ ರಸ್ತೆಯ ಅಖಿಲೇಶ್ ಎಂಬವರು ಈ ಕೊಲೆ ಪ್ರಕರಣದ ಆರೋಪಿಗಳಾ ಗಿದ್ದಾರೆ. ಅಂದು ಕಣ್ಣೂರು ಜಿಲ್ಲಾ ಕ್ರೈಮ್ ಬ್ರಾಂಚ್ ಎಸ್‌ಪಿಯಾಗಿದ್ದ ಡಾ. ಎ. ಶ್ರೀನಿವಾಸರ ನೇತೃತ್ವದ ವಿಶೇಷ ಪೊಲೀಸರ ತಂಡ ಈ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ಕೊಲೆ ನಡೆದ ೯೦ ದಿನಗಳೊಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಡಿಎನ್‌ಎ ಪರೀಕ್ಷಾ ವರದಿ ಸೇರಿದಂತೆ ೫೦೦ರಷ್ಟು ದಾಖಲುಪತ್ರಗಳನ್ನು ಪುರಾವೆ ರೂಪದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಮೂವರು ಆರೋ ಪಿಗಳು ಜಾಮೀನು ಲಭಿಸದೆ ಈಗಲೂ ನ್ಯಾಯಾಂಗ ಬಂಧನzಲ್ಲೇ ಕಳೆಯುತ್ತಿದ್ದಾರೆ