ರೈನೋಕ್ರಾಫ್ಟ್ ಲೈವ್ ರೈನೋ ಪ್ಲಾಸ್ಟಿ ಸರ್ಜಿಕಲ್ ಕಾರ್ಯಾಗಾರ

ಕಣ್ಣೂರು: ಕಣ್ಣೂರು ಬೇಬಿ ಸ್ಮಾರಕ ಆಸ್ಪತ್ರೆಯಲ್ಲಿ ಇಎನ್‌ಟಿ ಮತ್ತು ಹೆಡ್ ಆಂಡ್ ನೆಕ್ ಸರ್ಜರಿ ವಿಭಾಗದ ನೇತೃತ್ವದಲ್ಲಿ ‘ರೈನೋಕ್ರಾಫ್ಟ್ ೧.೦ ಎಂಬ ಲೈವ್ ರೈನೋಪ್ಲಾಸ್ಟಿ ಸರ್ಜಿಕಲ್ ವರ್ಕ್ ಶಾಪ್ ಯಶಸ್ವಿಯಾಗಿ ನಡೆಸಲಾಯಿತು. ಮೂಗಿನ ಶಸ್ತ್ರಚಿಕಿತ್ಸೆಯಲ್ಲಿ ಗಮನ ಕೇಂದ್ರೀಕರಿಸಿ ನಡೆದ ಉತ್ತರ ಮಲಬಾರ್‌ನ ಮೊದಲ ಲೈವ್ ರೈನೋಪ್ಲಾಸ್ಟಿ ಸರ್ಜಿಕಲ್ ವರ್ಕ್ ಶಾಪ್ ಇದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಭಾರತದ ವಿವಿಧ ಭಾಗಗಳ ಪ್ರಸಿದ್ಧರಾದ ವೈದ್ಯರುಗಳು ಈ ವರ್ಕ್‌ಶಾಪ್‌ನಲ್ಲಿ ಭಾಗವಹಿಸಿದರು. ಮೂರು ಶಸ್ತ್ರಚಿಕಿತ್ಸೆ ಈ ವೇಳೆ ನಡೆಸಲಾಯಿತು. ಡಾ| ಜಾಬಿರ್ ಬಿನ್ ಉಮರ್ ಕೆ.ಪಿ.ಯವರ ಕನಸಾಗಿತ್ತೆಂದೂ ಉತ್ತರ ಮಲಬಾರ್ ವಲಯದಲ್ಲಿ ರೈನೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆಯ ಬಗ್ಗೆ ಪ್ರಥಮವಾಗಿ ನಡೆದಿದ್ದು, ಶಸ್ತ್ರಚಿಕಿತ್ಸೆಗಳ ಬಗ್ಗೆ ಅರಿವು ಮೂಡಿಸಲು, ಮೆಡಿಕಲ್ ಶಿಕ್ಷಣ ಪ್ರೋತ್ಸಾಹಿಸಲು ಸಾಧ್ಯವಾಗಿದೆ ಎಂದು ತಿಳಿಸಲಾಗಿದೆ.

ಬಿಎಂಎಚ್ ಕ್ಲಸ್ಟರ್ ಸಿಇಒ ನಿರೂಪ್ ಮುಂಡಯಾಡನ್ ಉದ್ಘಾಟಿ ಸಿದರು. ಎಜಿಎಂ ಮನೋಜ ಜಿ.ಎಂ, ಮೆಡಿಕಲ್ ಎಡ್ವೈಸರ್ ಡಾ| ಮುಹ ಮ್ಮದ್ ಅಬ್ದುಲ್ ನಾಸರ್ ಇ.ಕೆ, ಸ್ವಾಗತ ಸಮಿತಿ ಅಧ್ಯಕ್ಷ ಡಾ| ಪದ್ಮನಾಭನ್ ಕೆ, ಆರ್ಗನೈಸಿಂಗ್ ಕಾರ್ಯದರ್ಶಿ ಡಾ| ಜಾಬಿರ್ ಬಿನ್ ಉಮ್ಮರ್ ಕೆ.ಸಿ, ಸೀನಿ ಯರ್ ಆಪರೇಶನ್ಸ್ ಮೆನೇಜರ್ ಬಿ.ಆರ್.ಸಿ. ಉಣ್ಣಿತ್ತಾನ್ ಮಾತನಾಡಿದರು.

RELATED NEWS

You cannot copy contents of this page