ರೈಲಿಗೆ ಕಲ್ಲು ತೂರಾಟ: ಮವ್ವಾರು ನಿವಾಸಿ ಸಹಿತ ಇಬ್ಬರ ಸೆರೆ

ಕಾಸರಗೋಡು: ಮಂಗಳೂರಿ ನಿಂದ ಚೆನ್ನೈಗೆ ಹೋಗುತ್ತಿದ್ದ ರೈಲಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂ ಬಂಧಿಸಿ ಇಬ್ಬರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಲದ ರಾಣಿನಗರ ನಿವಾಸಿ ರೋಷನ್ ರಾಯ್ (19) ಮತ್ತು ಕುಂಬ್ಡಾಜೆ ಮವ್ವಾರ್ ಒಡಂಬಲ ನಿವಾಸಿ ವಿ. ಸುಂದರ(45) ಬಂಧಿತರಾದ ಆರೋಪಿಗಳು. ಬೇಕಲ ಕೋಟೆ ರೈಲು ನಿಲ್ದಾಣ (ಹಳೆ ಪಳ್ಳಿಕ್ಕೆರೆ)ದ ಎರಡನೇ ಪ್ಲಾಟ್ ಫಾಂನ ಉತ್ತರ ಭಾಗದಲ್ಲಿ ನಿನ್ನೆ ಅಪರಾಹ್ನ  2.55ರ ವೇಳೆ ಮಂಗಳೂರು-ಚೆನ್ನೈ ಮೈಲ್  ರೈಲಿಗೆ ಕಲ್ಲು ತೂರಾಟ ನಡೆಸಲಾಗಿದೆ. ವಿಷಯ ತಿಳಿದ ಕಾಸರಗೋಡು ರೈಲ್ವೇ ಭದ್ರತಾ ಪಡೆ ಮತ್ತು ಬೇಕಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆ ಪರಿಶೀಲನೆ ಬಳಿಕ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

You cannot copy contents of this page