ನವದೆಹಲಿ: ದೇಶದ ವಿವಿಧೆಡೆಗಳಲ್ಲಿ ಇತ್ತೀಚೆಗೆ ನಡೆದ ರೈಲು ಹಳಿ ಬುಡಮೇಲು ಕೃತ್ಯಗಳಲ್ಲಿ ಏನಾದರೂ ದುಷ್ಕೃತ್ಯದ ಸಂಚು ಅಡಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪ್ರಾಥಮಿಕ ತನಿಖೆ ಆರಂಭಿಸಿದೆ. ಇತ್ತೀಚೆಗೆ ರೈಲು ಹಳಿ ತಪ್ಪಿಸುವ ಹಲವು ಘಟನೆಗಳು ರಾಜ್ಯದಲ್ಲಿ ನಡೆದಿತ್ತು. ಈ ಪೈಕಿ 4 ಪ್ರಕರಣಗಳು ಅನುಮಾನಕ್ಕೆ ದಾರಿ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಅದರ ಮೇಲೆ ಎನ್ಐಎ ನಿಗಾ ಇರಿಸಿ ತನಿಖೆ ಆರಂಭಿಸಿದೆ.
