ರೈಲು ಹಳಿಗಳಲ್ಲಿ ಕಲ್ಲಿರಿಸಿದ ವಿದ್ಯಾರ್ಥಿಗಳಿಬ್ಬರು ವಶಕ್ಕೆ

ಕಾಸರಗೋಡು: ಸಂಚರಿಸು ತ್ತಿರುವ ರೈಲು ಹಳಿಗೆ ಕಲ್ಲಿರಿಸಿದ  ವಿದ್ಯಾರ್ಥಿ ಗಳಿಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಳಪಟ್ಟಣಂ ರೈಲು ಹಳಿಯಲ್ಲಿ ಕಲ್ಲಿರಿಸಿದ ಘಟನೆಗೆ ಸಂಬಂಧಿಸಿ ಈ ವಿದ್ಯಾರ್ಥಿಗಳು ವಳಪಟ್ಟಣಂ ಪೊಲೀಸರ ವಶಕ್ಕೊಳಗಾಗಿದ್ದಾರೆ.

ನಿನ್ನೆ ಇವರು ಮಧ್ಯಾಹ್ನ ೧೨.೧೦ಕ್ಕೆ ರೈಲಿಗೆ ಕಲ್ಲಿರಿಸಿದ್ದರು.  ಆವೇಳೆ ರೈಲುಹಳಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಕಂಡು  ತಕ್ಷಣ ಅವರನ್ನು ಸೆರೆಹಿಡಿದಿದ್ದಾರೆ. ವಳಪಟ್ಟಣಂ ಪ್ರದೇಶದಲ್ಲಿ ಈ ಹಿಂದೆಯೂ ಹಲವು ಬಾರಿ ಹಲವು ರೈಲುಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆಗಳು ನಡೆದಿದ್ದವು.

೨೦೧೨ರಲ್ಲಿ ಉಪ್ಪಳ ರೈಲ್ವೇ ಟ್ರಾಕ್‌ನಲ್ಲಿ ಕಲ್ಲಿಡಲು ಯತ್ನಿಸಿದ ಮೂವರು ವಿದ್ಯಾರ್ಥಿಗಳನ್ನು ಅಂದು ಊರವರೇ ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಆದರೆ ಪ್ರಾಯಪೂರ್ತಿಯಾಗದ ಕಾರಣದಿಂದ  ಆ ವಿದ್ಯಾರ್ಥಿಗಳನ್ನು ಬಳಿಕ ಪೊಲೀಸರು ಬಿಡುಗಡೆಗೊಳಿಸಿದ್ದರು. ವಿದ್ಯಾರ್ಥಿಗಳು ರೈಲು ಹಳಿಗಳಲ್ಲಿ ಕಲ್ಲಿರಿಸುತ್ತಿರುವುದು ಮತ್ತು ಕಲ್ಲು ತೂರಾಟ ನಡೆಸುತ್ತಿರುವ ರೀತಿಯು   ಬೆಂಕಿಯೊಂದಿಗೆ ನಡೆಸುವ ಸರಸಾಟಕ್ಕೆ ಸಮಾನವಾಗಿದೆಯೆಂದು ಆದ್ದರಿಂದ ಅಂತಹ ಮಕ್ಕಳು ಮತ್ತು ಅವರ ಹೆತ್ತವರು ಗರಿಷ್ಠ ಜಾಗ್ರತೆ ಪಾಲಿಸಬೇಕೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.

You cannot copy contents of this page