ರೋಗಬಾಧಿತನಾಗಿರುವ ವ್ಯಕ್ತಿಯ ಹೆಸರಿನಲ್ಲಿ ಅವರಿಗೆ ತಿಳಿಯದೆ ಸಾಲ ತೆಗೆದು ಮೋಸ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದ ವಿರುದ್ಧ ಪೊಲೀಸರಿಗೆ ದೂರು

ಕುಂಬಳೆ:  ರೋಗ ಬಾಧಿಸಿ ಚಿಕಿತ್ಸೆಯಲ್ಲಿರುವ ಕುಂಬಳೆ ಬಟ್ರಂಪಾಡಿಯ ಪಿ. ಸುಕುಮಾರ ಎಂಬವರ ಹೆಸರಲ್ಲಿ ಅವರು ತಿಳಿಯದೆ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದಿಂದ  ಸಾಲ ಪಡೆದಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಬ್ಯಾಂಕ್‌ನ ಸೆಕ್ರೆಟರಿ ಪೂರ್ಣಿಮ, ದಾಮೋದರ, ಜಯಲಕ್ಷ್ಮಿ ಎಂಬಿವರ ವಿರುದ್ಧ ದೂರು ನೀಡಲಾಗಿದೆ. ಈ ಬಗ್ಗೆ ಈ ಹಿಂದೆ ಸಹಕಾರಿಸಂಘ ಹಾಗೂ ಸಹಕಾರಿ ಇಲಾಖೆಗೆ ನೀಡಿದ್ದ ದೂರಿನ ಕುರಿತು ತನಿಖೆ ನಡೆಸಿದ ಸಹಕಾರಿ ಇಲಾಖೆಯ ನೌಕರರಾದ ಬೈಜುರಾಜ್, ಅಡ್ಮಿನಿಸ್ಟ್ರೇಟರ್ ಆಗಿದ್ದ ಸುನಿಲ್ ಕುಮಾರ್ ಎಂಬಿವರು ಆರೋಪಿಗಳನ್ನು ಸಂರಕ್ಷಿಸಲು ಗೂಢಾಲೋಚನೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣದ ತನಿಖೆ ಕುರಿತಾದ ಮಾಹಿತಿಯನ್ನು  ರಾಜ್ಯದ ಯಾವುದೇ ಪೊಲೀಸ್ ಠಾಣೆಯಿಂದ ಕೇರಳ ಪೊಲೀಸ್‌ನ ವೆಬ್‌ಸೈಟ್ ಮೂಲಕ ಪರಿಶೀಲಿಸಬ ಹುದಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮರ್ಚೆಂಟ್ಸ್ ವೆಲ್ಫೇರ್ ಸಂಘದ ಎ 115ನೇ ನಂಬ್ರದ ಸದಸ್ಯ ಹಾಗೂ 2039 ನಂಬ್ರದ ಖಾತೆಯ  ಮಾಲಕನಾದ ಸುಕುಮಾರರ ಹೆಸರಲ್ಲಿ 2018ರಲ್ಲಿ ಅವರು ತಿಳಿಯದೆ ಸಾಲ ತೆಗೆಯಲಾಗಿದೆ. ಈ ವಿಷಯ ಗಮನಕ್ಕೆ ಬಂದ ಅವರು 2023ರಲ್ಲಿ ಬ್ಯಾಂಕ್‌ಗೆ ತೆರಳಿ ತನ್ನ ಹೆಸರಲ್ಲಿರುವ ಸಾಲದ ಮಾಹಿತಿಗಳನ್ನು ಆಗ್ರಹಪಟ್ಟಿದ್ದರು. ಆದರೆ   ಸುಕುಮಾರರ ಅರ್ಜಿಯನ್ನು ಸೆಕ್ರೆಟರಿ ನಿರಾಕರಿಸಿದ್ದರೆನ್ನಲಾಗಿದೆ. ಹಲವು ಬಾರಿ ಆಗ್ರಹಪಟ್ಟರೂ  ಪ್ರತಿಕ್ರಿಯೆ ಲಭಿಸದಿದ್ದಾಗ ಬ್ಯಾಂಕ್‌ನ ಅಧ್ಯಕ್ಷ ಅಬ್ದುಲ್ ಸತ್ತಾರ್‌ರಿಗೆ   ದೂರು ನೀಡಿ ಸಾಲದ ಮಾಹಿತಿಗಳನ್ನು ಆಗ್ರಹಪ ಟ್ಟಿದ್ದರು. ಸತ್ತಾರ್  ಕೂಡಾ ಸುಕುಮಾ ರರ ಬೇಡಿಕೆಯನ್ನು ಅವಗಣಿಸಿದರು. 2024 ಆಗೋಸ್ತ್ ೮ರಂದು ಬ್ಯಾಂಕ್‌ನಲ್ಲಿ   ಅಡ್ಮಿನಿ ಸ್ಟ್ರೇಟರ್ ಆಡಳಿತ  ಜ್ಯಾರಿಗೆ ಬಂದಾಗ ಸುಕು ಮಾರ ಮತ್ತೆ  ದೂರು ಸಲ್ಲಿಸಿದರು. ಅದರೊಂದಿಗೆ ವ್ಯಕ್ತಿಪಲ್ಲಟ ನಡೆಸಿ ಸಾಲ ಪಡೆದಿರುವುದು  ತಿಳಿದುಬಂದಿದ್ದು, ಅದು ಭಾರೀ ಚರ್ಚೆಗೆಡೆಯಾಯಿತು. ಸುಕುಮಾರರ ಹೆಸರಲ್ಲಿರುವ ನಕಲಿ ಸಾಲಕ್ಕೆ ಸಾಕ್ಷಿಗಳು ಸಂಘದ ಸದಸ್ಯರಾದ ಜಲಜಾಕ್ಷಿ ಹಾಗೂ ಪಿ. ಹಂಸ ಎಂಬಿವರಾಗಿದ್ದಾರೆ.   ತಾನು ಸಾಲ ತೆಗೆಯುವುದನ್ನು ನೀವು ಕಂಡಿದ್ದೀರೇ ಎಂದು ಜಲಜಾಕ್ಷಿಯೊಂದಿಗೆ  ಪ್ರಶ್ನಿಸಿದಾಗ ಇಲ್ಲ ಎಂಬುವುದಾಗಿ ಅವರು ಉತ್ತರಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಸುಕುಮಾರ ತಿಳಿಸಿದ್ದಾರೆ. ಸಂಘದಿಂದ ತನಗೆ ಹಣ ನೀಡುವುದನ್ನು ಕಂಡಿದ್ದೀರೇ ಎಂದು ಪ್ರಶ್ನಿಸಿದಾಗಲೂ ಇಲ್ಲ ಎಂಬುವುದಾಗಿ ಅವರು ತಿಳಿಸಿದ್ದರು. ಹಾಗಾದರೆ ಯಾಕಾಗಿ ಸಹಿ ಹಾಕಿದಿರೆಂದು ಕೇಳಿದಾಗ ದಾಮು ಹೇಳಿದುದರಿಂದ ಸಹಿ ಹಾಕಿರುವುದಾಗಿ ಅವರು ತಿಳಿಸಿದ್ದರು.  ಎರಡನೇ ಸಾಕ್ಷಿ ಎ ಹಂಸರ ಸದಸ್ಯತ್ವ ನಂಬ್ರ 159 ಆಗಿದೆಯೆಂದೂ ಆದರೆ ಜಾಮೀನಿನ ದಾಖಲೆಯಲ್ಲಿ  153 ಎಂದು ಬರೆದಿರುವುದಾಗಿ ಸುಕುಮಾರ ದೂರಿನಲ್ಲಿ ತಿಳಿಸಿದ್ದಾರೆ. 153ನೇ ನಂಬ್ರದ ಸದಸ್ಯ ಸಿ.ಎಚ್. ಮುಹಮ್ಮದ್ ಕುಂಞಿ ಯಾಗಿದ್ದಾರೆ.  ಅಡ್ಮಿನಿಸ್ಟ್ರೇಟರ್‌ಗೆ ದೂರು ನೀಡಿದೊಡನೆ ಅಡ್ಮಿನಿಸ್ಟ್ರೇಟರ್, ಸೆಕ್ರೆಟರಿ, ತನಿಖಾಧಿಕಾರಿ ಬೈಜುರಾಜು ಹಾಗೂ ದಾಮು ಸೇರಿ ಸುಕುಮಾರರ ಮನೆಗೆ ತಲುಪಿದರು.  ದೂರು ಹಿಂತೆಗೆ ದುಕೊಳ್ಳಬೇಕೆಂದು ಅವರು ತಿಳಿಸಿದ್ದು, ಇಲ್ಲದಿದ್ದಲ್ಲಿ ತಮ್ಮ ಕೆಲಸ ಹೋಗಬಹು ದೆಂದು ತಿಳಿಸಿದ್ದರೆನ್ನೆಲಾಗಿದೆ. ಸಾಲವನ್ನು ದಾಮು ಮಾರ್ಚ್‌ನಲ್ಲಿ ಪಾವತಿಸಿ ಮುಗಿಸುವುದಾಗಿ ಭರವಸೆ ನೀಡಿದ್ದಾರೆ. ಅನಂತರ ಸಾಲವನ್ನು ಸುಕುಮಾರರೇ ತೆಗೆದಿರುವುದಾಗಿ  ಮೇಲಧಿಕಾರಿಗಳಿಗೆ  ವರದಿ ಸಲ್ಲಿಸಿರುವುದಾಗಿ ಹೇಳ ಲಾಗುತ್ತಿದೆ. ಇದರಿಂದ ರೋಷಗೊಂಡ ಸುಕುಮಾರ ಪೊಲೀಸರಿಗೆ ದೂರು ನೀಡಿದ್ದಾರೆ.

You cannot copy contents of this page