ಲಂಡನ್: ಭಾರತದ ವಿದೇ ಶಾಂಗ ಸಚಿವ ಎಸ್. ಜೈಶಂಕರ್‌ರ ಮೇಲೆ ಲಂಡನ್‌ನಲ್ಲಿ ಖಾಲಿಸ್ತಾನಿ ಉಗ್ರರು ದಾಳಿಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.
ಲಂಡನ್‌ನ ಸ್ವತಂತ್ರ ನೀತಿ ಸಂಸ್ಥೆಯಾದ ಚೌಥಮ್ ಹೌಸ್‌ನಲ್ಲಿ ನಡೆಸಿದ ಚರ್ಚೆಯಲ್ಲಿ ಭಾಗವಹಿಸಿ ಜೈಶಂಕರ್ ಹೊರ ಬರುತ್ತಿರುವ ವೇಳೆ ಅವರ ಮೇಲೆ ಖಾಲಿಸ್ತಾನಿ ಉಗ್ರಗಾ ಮಿಗಳು ದಾಳಿ ನಡೆಸಲೆತ್ನಿಸಿದ್ದಾರೆ.
ಖಾಲಿಸ್ತಾನಿ ಉಗ್ರರು ಜೈಶಂಕರ್‌ರ ವಾಹನದ ಕಡೆ ಧಾವಿಸಿ ಅದರಲ್ಲಿ ಅಳವಡಿಸಲಾಗಿದ್ದ ಭಾರತೀಯ ರಾಷ್ಟ್ರಧ್ವಜವನ್ನು ಕಿತ್ತೆಸೆದು ಅದನ್ನು ಹರಿದು ಹಾಕಿದ್ದಾರೆ. ಜೈಶಂಕರ್‌ರ ಮೇಲೆ ದಾಳಿಗೂ ಯತ್ನಿಸಿದ್ದಾರೆ. ಇದೇ ವೇಳೆ ಖಾಲಿಸ್ತಾನಿ ಪರ ಉಗ್ರರು ಅದೇ ಸ್ಥಳದ ಹೊರಗಡೆ ಜಮಾಯಿಸಿ ಖಾಲಿಸ್ತಾನಿ ಪತಾಕೆಗಳನ್ನು ಬೀಸುತ್ತಾ ಜೈಶಂಕರ್ ಅವರ ಮುಂದೆ ಭಾರತ ವಿರೋಧಿ ಘೋಷಣೆಗಳನ್ನು ಮೊಳಗಿಸಿದ್ದಾರೆ. ಅದನ್ನು ಕಂಡ ಭದ್ರತಾ ಪಡೆಗಳು ಪ್ರತಿಭಟನೆಗಾರರನ್ನು ತಡೆದು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಭಾರತ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಜೈಶಂಕರ್ ಪ್ರಸ್ತು ಮಾರ್ಚ್ ೪ರಿಂದ ೯ರ ವರೆಗೆ ಯುನೈಟೆಡ್ ಕಿಂಗ್‌ಡಮ್ ಮತ್ತು ಐರ್ಲೆಂಡ್ ಅಧ್ಯಕ್ಷರ ಭೇಟಿಯಲ್ಲಿದ್ದಾರೆ. ಇನ್ನು ಭಾರತ ಮತ್ತು ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಹೊಂದಿದ್ದು, ಇದು ರಕ್ಷಣೆ, ವ್ಯಾಪಾರ, ಆರೋಗ್ಯ, ಶಿಕ್ಷಣ ಮತ್ತು ಜನರಿಂದ ಜನರಿಗೆ ಸಂಬಂಧಗಳಂತಹ ಬಹುಕ್ಷೇತ್ರಗಳಲ್ಲಿ ಆಳವಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.ಲಂಡನ್‌ನಲ್ಲಿ ಭಾರತೀಯ ವಿದೇಶಾಂಗ ಸಚಿವರ ಮೇಲೆ ಖಾಲಿಸ್ತಾನಿ ಉಗ್ರರು ದಾಳಿ ನಡೆಸಲೆತ್ನಿಸಿದ ಹೇಯ ಕೃತ್ಯವನ್ನು ಭಾರತ ಸರಕಾರ ತೀವ್ರವಾಗಿ ಖಂಡಿಸಿದೆ. ದಾಳಿ ನಡೆಸಲೆತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಾರತ ಆಗ್ರಹಿಸಿದೆ.