ಲಾಟರಿ ಬಹುಮಾನ ಬಂದಿದೆಯೆಂದು ತಿಳಿದು ತಕ್ಷಣ ಬಂದ ಬೈಕ್ ಕಳ್ಳ ಪೊಲೀಸರ ವಶಕ್ಕೆ

ಕಾಸರಗೋಡು: ಲಾಟರಿ ಬಹುಮಾನ ಬಂದಿದೆಯೆಂದು ತಿಳಿದು ತಕ್ಷಣ ಬಂದ ಬೈಕ್ ಕಳ್ಳನನ್ನು ನಾಗರಿಕರು ಕೈಯಾರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದರು.

ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯಾಟಡ್ಕದಲ್ಲಿ ಈ ಘಟನೆ ನಡೆದಿದೆ. ಕರ್ನಾಟಕ ನಿವಾಸಿಯೂ ಪೆರಿಯಾಟಡ್ಕದಲ್ಲಿ ವಾಸಿಸುವ ಬಿಮ್ಮು ಎಂಬಾತ ಪೊಲೀಸರ ಕಸ್ಟಡಿಯಲ್ಲಿದ್ದ್ದು ಈತನನ್ನು ತನಿಖೆ ನಡೆಸಲಾಗುತ್ತಿದೆ.

ಒಂದು ವಾರ ಹಿಂದೆ ಹಾಡಹಗಲೇ ಚೆರುಂಬಾ ನಿವಾಸಿ ಬಷೀರ್‌ರ ಬೈಕ್ ಪೆರಿಯಾಟಡ್ಕ ಪೇಟೆಯಿಂದ ಕಳವಿಗೀಡಾಗಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದರು. ಪೇಟೆಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಬಿಮ್ಮುವನ್ನು ಹೋಲುವ ವ್ಯಕ್ತಿ ಬೈಕ್‌ನೊಂದಿಗೆ ತೆರಳುತ್ತಿರುವುದು ಕಂಡುಬಂದಿದೆ.  ಅಲ್ಲದೆ ಅಂದಿನಿಂದ ಬಿಮ್ಮು ನಾಪತ್ತೆಯಾಗಿದ್ದನು. ಇದು ಕಾಟಿಯಡ್ಕದ ಚೆಗುವೇರ ಕ್ಲಬ್‌ನ ಸದಸ್ಯರ ಗಮನಕ್ಕೆ ಬಂದಿತ್ತು. ಬೈಕ್ ಕಳವು ನಡೆಸಿರುವುದು ಬಿಮ್ಮು ಆಗಿರಬಹುದೆಂಬ ಅಂದಾಜಿನ ಮೇರೆಗೆ ಆತನಿಗಾಗಿ ಸಮೀಪ ಪ್ರದೇಶಗಳಲ್ಲಿ ಶೋಧ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ.  ಆದ್ದರಿಂದ ಬಿಮ್ಮುವಿನ ಜೊತೆ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯ ಮೂಲಕ ಬಿಮ್ಮುವಿಗೆ ಫೋನ್ ಕರೆ ಮಾಡಿ ನಿನಗೆ ಲಾಟರಿ ಬಹುಮಾನ ಬಂದಿದೆ. ಶೀಘ್ರ ಬಂದರೆ ಹಣ ಸಿಗಬಹುದೆಂದು ತಿಳಿಸಲಾಯಿತು.  ಈ ವಿಷಯ ತಿಳಿದ ತಕ್ಷಣ ಬಿಮ್ಮು ಪೆರಿಯಾಟಡ್ಕಕ್ಕೆ ಬಂದಿ ದ್ದಾನೆ. ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಹಸ್ತಾಂತರಿ ಲಾಯಿತು. ಪೊಲೀಸರು ಆತನನ್ನು ವಿಚಾರಿಸಿದಾಗ ಬೈಕ್ ಕಳವು ನಡೆಸಿರುವುದನ್ನು ಆತ ಒಪ್ಪಿಕೊಂಡಿದ್ದಾನೆ. ಬೈಕ್  ಕಳವುಗೈದು ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಕೆಟ್ಟುಹೋಯಿ ತೆಂದೂ ಇದರಿಂದ ಅದನ್ನು ಅಲ್ಲಿ ಉಪೇಕ್ಷಿಸಿರುವುದಾಗಿ ಬಿಮ್ಮು ತಿಳಿಸಿದ್ದಾನೆ. ಇದರಿಂದ ಆ ಸ್ಥಳಕ್ಕೆ ಆತನನ್ನು ಪೊಲೀ ಸರು ಕೊಂಡೊಯ್ದಾಗ ಬೈಕ್ ಅಲ್ಲಿ ನಾಪತ್ತೆಯಾಗಿದೆ. ಆ ಬೈಕ್‌ನ್ನು ಅಲ್ಲಿಂದ ಬೇರೆಯಾರಾದರೂ  ಕೊಂಡೊಯ್ದಿರಬಹು ದೆಂದು ಸಂಶಯಿಸಲಾಗಿದೆ.  ಬಿಮ್ಮು ಪೊಲೀಸರ ಕಸ್ಟಡಿಯಲ್ಲಿದ್ದು, ಕಳವಿಗೀಡಾದ ಬೈಕ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

You cannot copy contents of this page