ಲೋಕಸಭಾ ಚುನಾವಣೆ: ಪಚ್ಲಂಪಾರೆಯಲ್ಲಿ ಬಿಜೆಪಿ ಸಭೆ
ಉಪ್ಪಳ: ಬಿಜೆಪಿ ಮಂಗಲ್ಪಾಡಿ ಉತ್ತರ ವಲಯದ ಪಚ್ಲಂಪಾರೆ ಬೂತ್ (73)ನಲ್ಲಿ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆ ನಿನ್ನೆ ನಡೆಯಿತು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯೆ, ಉತ್ತರ ವಲಯದ ಪ್ರಭಾರಿ ಮುರಳೀಧರ ಯಾದವ್ ಮಾತನಾಡಿದರು. ಮುಖಂಡರಾದ ಕೆ.ಪಿ ವಲ್ಸರಾಜ್, ಉತ್ತರ ವಲಯ ಅಧ್ಯಕ್ಷ ದಿನೇಶ್ ಮುಳಿಂಜ, ಪ್ರಧಾನ ಕಾರ್ಯದರ್ಶಿ ರಂಜಿತ್ ಶಾರದಾನಗರ, ಬೂತ್ ಉಪಾಧ್ಯಾಕ್ಷ ಸುಜಿತ್ ಪಚ್ಲಂಪಾರೆ ಹಾಗೂ ಕಾರ್ಯಕರ್ತರು ಭಾಗವಹಿಸಿದರು.