ಲೋಕೋಪಯೋಗಿ ಗುತ್ತಿಗೆದಾರ ನಿಧನ

ಕುಂಬಳೆ: ಪೇರಾಲ್ ಮಡಿಮೊಗರು ನಿವಾಸಿ ಪಿ.ಎಸ್. ಮೊಹಮ್ಮದ್ ಹಾಜಿ (84) ನಿಧನ ಹೊಂದಿದರು. ಲೋಕೋಪಯೋಗಿ ಗುತ್ತಿಗೆದಾರ ನಾಗಿದ್ದ ಇವರು ವೃದ್ದಾಪ್ಯ ಸಹಜ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದರು. ದೀರ್ಘಕಾಲದಿಂದ ಮಡಿಮೊಗರು ಜುಮಾ ಮಸೀದಿ ಸಮಿತಿ ಅಧ್ಯಕ್ಷರಾಗಿದ್ದರು. ಪೇರಾಲ್ ವಾರ್ಡ್ ಮುಸ್ಲಿಂಲೀಗ್ ಮಾಜಿ ಅಧ್ಯಕ್ಷರಾಗಿದ್ದರು. ಕುಂಬಳೆಯಲ್ಲಿ ಪ್ರಸಿದ್ಧವಾದ ಸಬೀನ ಹಾಡಿನ ಗಾಯಕನಾಗಿದ್ದರು.

ಮೃತರು ಪತ್ನಿ ಖದೀಜ, ಮಕ್ಕಳಾದ ಶೇಕಾಲಿ, ಅಬ್ದುಲ್ಲ, ಅಬ್ದುಲ್ ರಹ್ಮಾನ್, ಯೂಸಫ್, ಅಬ್ದುಲ್ ಅಸೀಸ್, ಇಸ್ಮಾಯಿಲ್, ಆಯಿಶ, ಅಳಿಯ-ಸೊಸೆಯಂದಿರಾದ ಅಬ್ಬಾಸ್, ರಂಶಿ, ಮರಿಯಮ್ಮ, ಕುಬ್ರ, ರುಬೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page