ವನ್ಯಜೀವಿ ದಾಳಿಯಲ್ಲಿ ಸಾವನ್ನಪ್ಪುವವರ ಕುಟುಂಬಕ್ಕೆ 24 ಲಕ್ಷ ರೂ. ನಷ್ಟ ಪರಿಹಾರಕ್ಕೆ ಅರ್ಹತೆ ಇದೆ- ಅಮಿಕಸ್ ಕ್ಯೂರಿ

ಎರ್ನಾಕುಳಂ: ವನ್ಯಜೀವಿಗಳ ದಾಳಿಯಿಂದ ಸಾವನ್ನಪ್ಪುವ ವ್ಯಕ್ತಿಗಳ ಕುಟುಂಬಕ್ಕೆ 24 ಲಕ್ಷ ರೂ. ನಷ್ಟ ಪರಿಹಾರ ಲಭಿಸುವ ಅರ್ಹತೆ ಇದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಅಮಿಕಸ್ ಕ್ಯೂರಿ ಹೇಳಿದೆ. ವಿಷಪೂರಿತ ಹಾವು ಕಡಿತಕ್ಕೊಳಗಾಗಿ ಸಾವನ್ನಪ್ಪಿದವರ ಕುಟುಂಬದವರಿಗೆ ನಷ್ಟ ಪರಿಹಾರ ನೀಡುವಿಕೆಯಲ್ಲಿ ಪಕ್ಷಪಾತ ನೀತಿ ಸಲ್ಲದೆಂದೂ ವರದಿಯಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ವನ್ಯಜೀವಿಗಳ ದಾಳಿ ಹೆಚ್ಚುತ್ತಿರುವ ಬಗ್ಗೆ ಹೈಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ಆಮಿಕಸ್ ಕ್ಯೂರಿ ಆ ಬಗ್ಗೆ ಅಧ್ಯಯನ ನಡೆಸಿ ಸರಕಾರಕ್ಕೆ ಈ ವರದಿ ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಒಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಈ ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ.

RELATED NEWS

You cannot copy contents of this page