ವಯನಾಡಿನಲ್ಲಿ ಭಾರೀ ಭೂಕುಸಿತ :40 ಕ್ಕೂ ಹೆಚ್ಚು ಮಂದಿ ಸಾವು

ವಯನಾಡು: ವಯನಾಡು ಜಿಲ್ಲೆಯ ಮೂರು ಕಡೆಗಳಲ್ಲಿ  ಇಂದು ಮುಂಜಾನೆ ಭಾರೀ ಭೂಕುಸಿತ ಸಂಭವಿಸಿದ್ದು, ಅದರಲ್ಲಿ ಕನಿಷ್ಠ ೪೦ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿ ದ್ದಾರೆ.  ಹಲವಾರು ಮಂದಿ ಅವಶೇಷ ಗಳಡಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.  ನೂರಾರು ಮಂದಿ ಗಾಯ ಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆ ಗಳಿಗೆ ಸಾಗಿಸಲಾಗಿದೆ. ಭೂಕುಸಿತ, ಪ್ರವಾಹಕ್ಕೆ 400ಕ್ಕೂ ಅಧಿಕ ಮನೆಗಳು ಹಾಗೂ ಕುಟುಂಬಗಳು ನಾಪತ್ತೆಯಾ ಗಿವೆ. ಅವರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ  ತೀವ್ರವಾಗಿ ನಡೆಯುತ್ತಿದೆ.

ಇಂದು ಮುಂಜಾನೆ 1.30ರ ವೇಳೆ ವೈತಿರಿ ತಾಲೂಕಿನ ಮೇಪಾಡಿ ಮುಂಡಕೈ, ಆಟ್ಟುಮಲ ಮತ್ತು ಚೂರಲ್‌ಮಲ ಎಂಬೀ ಪ್ರದೇಶಗಳಲ್ಲಿ  ಎರಡು ಬಾರಿ ಭೂಕುಸಿತ ಸಂಭವಿಸಿದೆ.  ಈ ವೇಳೆ ಧಾರಾಕಾರ ಮಳೆಯೂ ಸುರಿಯುತ್ತಿತ್ತು. ಜನರೆಲ್ಲಾ ನಿದ್ರೆಯಲ್ಲಿದ್ದ ಸಂದರ್ಭದಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದೆ. ಘಟನೆ ತಿಳಿದುಬಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿ ಸಲಾಗಿದೆ. ಭಾರತೀಯ ಸೇನಾಪಡೆ, ನೌಕಾಪಡೆ, ವಾಯುಪಡೆ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವ ಹಣಾ ತಂಡಗಳು, ಅಗ್ನಿಶಾಮಕದಳ, ನಾಗರಿಕಾ ಸಂರಕ್ಷಣಾ ಪೊಲೀಸರು  ಹಾಗೂ ಊರವರೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಭಾರತೀಯ ವಾಯುಪಡೆಯ ಎರಡು ಹೆಲಿಕಾಫ್ಟರ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗುತ್ತಿದೆ.  ಎಲ್ಲಾ ಪಡೆಗಳನ್ನು ಸಮನ್ವಯಗೊಳಿಸಿ ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಸಲಾಗುತ್ತಿದೆ.

 ಮುಂಡಕೈ, ಅಟ್ಟುಮಲ ಪ್ರದೇಶದ ಏಕೈಕ ಸೇತುವೆ  ಹಾಗೂ ಪ್ರಧಾನ ರಸ್ತೆ ಪ್ರವಾಹದಿಂದ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಮಾತ್ರವಲ್ಲ ಈ ಪ್ರದೇಶದ ಹಲವು ಮನೆಗಳೂ ಪ್ರವಾಹದಲ್ಲಿ ಸಿಲುಕಿಕೊಂಡಿವ.  ಒಂದರ ಹಿಂದೆ ಒಂದು ಎಂಬಂತೆ ಎರಡು ಬಾರಿ ಈ ಪ್ರದೇಶದಲ್ಲಿ ಭೂಕುಸಿತವುಂಟಾಗಿದೆ. ಇದೊಂದು ಭಾರೀ ಜನಸಾಂದ್ರತೆ ಹೊಂದಿರುವ ಪ್ರದೇಶವಾಗಿದ್ದು, ಕುಸಿದು ಬಿದ್ದಿರುವ ಕಟ್ಟಡ ಮತ್ತು ಮನೆಗಳೊಳಗೆ ಅದೆಷ್ಟೋ ಮಂದಿ ಸಿಲುಕಿಕೊಂಡಿರುವ  ಸಾಧ್ಯತೆಯೂ ಇದೆ. ಇದೊಂದು ಅತ್ಯಂತ ದುರ್ಗಮ ಪ್ರದೇಶವಾಗಿದ್ದು ಆದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಎದುರಾಗುತ್ತಿದೆ.  ವಯನಾಡ್ ಜಿಲ್ಲೆಯ ಸಮೀಪದ  ಜಿಲ್ಲೆಗಳಲ್ಲಿರುವ ಹೊಳೆಗಳಲ್ಲಿ ಹಲವು ಮೃತದೇಹಗಳು  ತೇಲಿಬರತೊq ಗಿದೆ.  ಈ ಮೃತದೇಹ ಗಳು ವಯನಾಡು ಭೂಕುಸಿತದಲ್ಲಿ ಸಾವನ್ನಪ್ಪಿರುವ ವ್ಯಕ್ತಿ ಗಳದ್ದಾಗಿ ದೆಯೆಂದು ಶಂಕಿಸಲಾಗುತ್ತಿದೆ.

ಈ ಪ್ರದೇಶದ ನೂರಾರು ಕುಟುಂ ಬಗಳನ್ನು ಅಲ್ಲಿಂದ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿದ್ದು, ಅವರಿಗಾಗಿ ಹಲವೆಡೆ ಗಳಲ್ಲಿ ಸಂತ್ರಸ್ತ ಕೇಂದ್ರಗಳನ್ನು ತೆರೆಯಲಾ ಗಿದೆ. ದುರ್ಘಟನೆಯಿಂದಾಗಿ ಭಾರೀ ಕೃಷಿ ನಾಶನಷ್ಟವೂ ಜೊತೆಗೆ ಉಂಟಾಗಿದೆ.

 ತೀವ್ರ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ: ಪರಿಹಾರ ಘೋಷಣೆ

ನವದೆಹಲಿ: ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಹಲ ವರು ಪ್ರಾಣ ಕಳೆದುಕೊಂಡು ಇನ್ನೂ ಹಲವಾರು ಮಂದಿ ಅವಶೇಷಗಳಡಿ ಸಿಲುಕಿಕೊಂಡಿರುವ ಭೀಕರ ದುರಂತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ವಯನಾಡಿನ ಈ ದುರಂತ ಇಡೀ ದೇಶವನ್ನೇ ನಡುಗಿಸಿದೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೂ ನಾನಿದ್ದೇನೆ.   ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂಬುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಮಾತ್ರವಲ್ಲ ಭೂಕುಸಿತದಲ್ಲಿ ಮೃತಪಟ್ಟವರ ಆಶ್ರಿತರಿಗೆ ಪಿಎಂಎನ್‌ಆರ್‌ಎಫ್‌ನಿಂದ ತಲಾ ಎರಡು ಲಕ್ಷ ರೂ.ಗಳು ಹಾಗೂ ಗಾಯ ಗೊಂಡವರಿಗೆ ತಲಾ 50,000ರೂ.ಗಳ ಪರಿಹಾರವನ್ನೂ ಪ್ರಧಾನಮಂತ್ರಿ ಘೋಷಿಸಿದ್ದಾರೆ. ಈ ದುರಂತಕ್ಕೆ ವಿರೋಧಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಸಿಲುಕಿಕೊಂಡವರನ್ನು ಸುರಕ್ಷಿತವಾಗಿ ರಕ್ಷಿಸುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page