ವಯನಾಡು ದುರಂತ ಪರಿಹಾರ ನಿಧಿಗೆ ಮವ್ವಾರು ಶಾಲೆಯ ಮಕ್ಕಳಿಂದ ಸಹಾಯ ಹಸ್ತ

ಮವ್ವಾರು:  ಭೂಕುಸಿತದಿಂದ ನಲುಗಿದ ವಯನಾಡು ಸಂತ್ರಸ್ತರ ಪರಿಹಾರ ನಿಧಿಗೆ ಮವ್ವಾರು ಎಯುಪಿ ಶಾಲೆಯ ವಿದ್ಯಾರ್ಥಿಗಳು ಸಹಾಯಹಸ್ತ ಚಾಚಿದ್ದಾರೆ. ಮಕ್ಕಳು ತಮ್ಮ ಮನೆಯಿಂದ ಸಂಗ್ರಹಿಸಿದ ಕೃಷಿ ವಸ್ತುಗಳನ್ನು ಮಾರಾಟ ಮಾಡಿ ಉಳಿತಾಯದ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಮುಖ್ಯೋಪಾಧ್ಯಾಯಿನಿ ಶೀಜಾ ಪಿ.ವಿ. ಅವರ ನೇತೃತ್ವದಲ್ಲಿ ಮಕ್ಕಳಿಂದ ಸಂಗ್ರಹಿಸಿದ 10,000 ರೂ.ಗಳನ್ನು ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೀಡಲಾಯಿತು. ಎಡಿಎಂರಿಗೆ ಈ ಮೊತ್ತವನ್ನು ಹಸ್ತಾಂತರಿಸಲಾಗಿದ್ದು, ಕಾಶಿನಾಥನ್, ಪ್ರಣಮ್ಯ, ಪಿಟಿಎ ಅಧ್ಯಕ್ಷ ವಿಶ್ವನಾಥನ್ ಬಳ್ಳಪದವು, ರಾಜೇಶನ್ ಭಾಗವಹಿಸಿದರು.

You cannot copy contents of this page