ವಯನಾಡ್ ನಿಧಿಗೆ ಮಂಜೇಶ್ವರ ಬ್ಲೋಕ್ ಡಿಫಿಯಿಂದ ನಗದು ಹಸ್ತಾಂತರ
ಪೈವಳಿಕೆ: ವಯನಾಡು ಪ್ರಕೃತಿ ದುರಂತ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ನೀಡಲು ಮಂಜೇಶ್ವರ ಬ್ಲೋಕ್ ಸಮಿತಿ ಸಂಗ್ರಹಿಸಿದ 2,84,648 ರೂ.ವನ್ನು ಜಿಲ್ಲಾ ಸಮಿತಿಗೆ ಹಸ್ತಾಂ ತರಿಸಲಾಯಿತು. ಬಾಯಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಫಿ ಜಿಲ್ಲಾ ಕಾರ್ಯದರ್ಶಿ ರಂಜಿತ್ ಮೇಲತ್, ಅಧ್ಯಕ್ಷ ಶಾಲು ಮ್ಯಾಥ್ಯು, ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೊಳಿಯವರಿಗೆ ಈ ಮೊತ್ತವನ್ನು ಹಸ್ತಾಂತರಿಸಲಾಯಿತು. ಮಂಜೇಶ್ವರ ಬ್ಲೋಕ್ ಸಮಿತಿ ಕಾರ್ಯದರ್ಶಿ ಅಬ್ದುಲ್ ಹಾರಿಸ್, ಅಧ್ಯಕ್ಷ ವಿನಯ ಕುಮಾರ್, ಬ್ಲೋಕ್ ಸಮಿತಿ ಸದಸ್ಯರಾದ ಝಕರಿಯ ಬಾಯಾರು, ಉದಯ ಸಿ.ಎಚ್., ವಿನೋದ್ರಾಜ್, ಮುಹಮ್ಮದ್ ಮುಸ್ತಫ, ನೌಶದ್, ನಾಸೀರ್ ಉಪಸ್ಥಿತರಿದ್ದರು.