ವರ್ಕಾಡಿ: ಕೆಪಿಸಿಸಿ ನಿಧಿ ಸಂಗ್ರಹಕ್ಕೆ ಚಾಲನೆ

ಮಂಜೇಶ್ವರ: ಕೆ.ಪಿ.ಸಿ.ಸಿ.ಆಶ್ರ ಯದಲ್ಲಿ ನಡೆಯಲಿರುವ ಸಮರಾಗ್ನಿ ಜನಾಂದೋಲನ ಕಾರ್ಯಕ್ರಮದ ಪ್ರಯುಕ್ತ ವರ್ಕಾಡಿ ಮಂಡಲದಲ್ಲಿ ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಲಾಯಿತು. ವರ್ಕಾಡಿ ಮಂಡಲ ಕಾರ್ಯ ದರ್ಶಿ ಅಬೂಬಕ್ಕರ್ ಬೋರ್ಕಳ ರಿಂದ ಮೊದಲ ಕೊಡುಗೆ ಸ್ವೀಕರಿ ಸುವ ಮೂಲಕ ಡಿ.ಸಿ.ಸಿ. ಕಾರ್ಯದರ್ಶಿ ಸುಂದರ ಆರಿಕ್ಕಾಡಿ ಕಾರ್ಯ ಕ್ರಮದ ಉದ್ಘಾಟನೆ ನಿರ್ವಹಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ, ನೇತಾರರಾದ ಅಜೀಜ್ ಕಲ್ಲೂರು, ಉಮ್ಮರ್ ಪಾಲೆಂಗ್ರಿ, ಮುಹಮ್ಮದ್ ಮಜಾಲ್, ಗಣೇಶ್ ಪಾವೂರು, ಸಲಾಂ ಮಾಂಕೋಡಿ ಉಪಸ್ಥಿತರಿದ್ದರು

You cannot copy contents of this page