ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಭಾರೀ ಬೆಂಕಿ ಅನಾಹುತ: ಕೋಟ್ಯಂತರ ರೂ.ಗಳ ನಾಶ ನಷ್ಟ

ಉಪ್ಪಳ: ವರ್ಕಾಡಿ ಬೇಕರಿ ಜಂಕ್ಷನ್‌ನಲ್ಲಿರುವ ಪ್ಲೈವುಡ್ ಕಾರ್ಖಾನೆಯಲ್ಲಿ  ಭಾರೀ ಅಗ್ನಿ ಅನಾಹುv ಸಂಭವಿಸಿದ್ದು, ಇದರಿಂದ ಕೋಟ್ಯಂತರ ರೂ.ಗಳ ನಾಶನಷ್ಟವುಂಟಾಗಿರುವುದಾಗಿ  ಹೇಳಲಾಗುತ್ತಿದೆ.   ಹೊಸಂಗಡಿ ನಿವಾಸಿ ಫಾರೂಕ್ ಎಂಬವರ ಮಾಲಕತ್ವದಲ್ಲಿರುವ  ಫಾರೂಕ್ ಪ್ಲೈವುಡ್ ಕಾರ್ಖಾನೆಯಲ್ಲಿ ನಿನ್ನೆ ರಾತ್ರಿ 7.30ರ ವೇಳೆ ಬೆಂಕಿ ಅನಾಹುತ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿರ ಬಹುದೆಂದು ಸಂಶಯಿಸಲಾಗುತ್ತಿದೆ. ಕಾರ್ಖಾನೆಯಲ್ಲಿದ್ದ ಉಪಕರಣಗಳು,    ಸಾಮಗ್ರಿಗಳೆಲ್ಲಾ ಉರಿದು ನಾಶಗೊಂಡಿದೆ.   ವಿಷಯ ತಿಳಿದು ಕಾಸರಗೋಡಿನಿಂದ ಒಂದು ಯೂನಿಟ್,  ಉಪ್ಪಳದಿಂದ ಎರಡು,, ಕುತ್ತಿಕ್ಕೋಲ್‌ನಿಂದ ಒಂದು, ಕಾಞಂಗಾಡ್‌ನಿಂದ ಎರಡು ಯೂನಿಟ್ ಅಗ್ನಿಶಾಮಕದಳ   ತಲುಪಿ ಬೆಂಕಿ ನಂದಿಸುವ ಕಾರ್ಯಾಚರಣೆ   ನಡೆಸಿದೆ.  ಕಾಸರಗೋಡು ಅಗ್ನಿಶಾಮಕದಳದ ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಎಂ.ಕೆ. ರಾಜೇಶ್ ಕುಮಾರ್ ನೇತೃತ್ವದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ನೇತೃತ್ವ ನೀಡಲಾಗಿದೆ.  ಬೆಂಕಿಯನ್ನು ಪೂರ್ಣವಾಗಿ ನಂದಿಸಲು ಸಾಧ್ಯವಾಗಿಲ್ಲ. ನಂದಿಸುವ ಕಾರ್ಯ ಮುಂದುವರಿಯುತ್ತಿದೆ.  ಕಾರ್ಖಾನೆ ಉರಿದ ಹಿನ್ನೆಲೆಯಲ್ಲಿ ಆ  ಪರಿಸರದಲ್ಲಿ ಹೊಗೆ ಆವೃತಗೊಂಡಿದೆ. ಘಟನೆ ವೇಳೆ ಕಾರ್ಖಾನೆಯಲ್ಲಿ ಯಾರೂ ಇಲ್ಲದಿದ್ದುದರಿಂದ ಹೆಚ್ಚಿನ ಅಪಾಯ ತಪ್ಪಿದೆ. ಕಾರ್ಖಾನೆಯೊಳಗಿಂದ ಹೊಗೆ ಬರುವುದನ್ನು ಕಂಡ ಕಾವಲುಗಾರ  ವಿಷಯವನ್ನು  ತಿಳಿಸಿದ್ದರು.

You cannot copy contents of this page