ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ಗೆ ೧೪೫ ಕೋಟಿ ರೂ. ವ್ಯವಹಾರ
ವರ್ಕಾಡಿ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ನ ೨೦೨೨-೨೩ನೇ ವಾರ್ಷಿಕ ಮಹಾಸಭೆ ನಡೆಯಿತು. ಬ್ಯಾಂಕ್ನ ಅಧ್ಯಕ್ಷ ದಿವಾಕರ ಎಸ್.ಜೆ. ಅಧ್ಯಕ್ಷತೆ ವಹಿಸಿದರು. ಈ ವರ್ಷದಲ್ಲಿ ಬ್ಯಾಂಕ್ ೧ ಕೋಟಿ ೯ ಲಕ್ಷ ರೂಪಾಯಿ ಲಾಭ ಗಳಿಸಿದ್ದು, ೧೪೫ ಕೋಟಿ ರೂ. ವ್ಯವಹಾರ ನಡೆಸಲಾಗಿದೆ ಎಂದು ತಿಳಿಸಲಾಯಿತು. ವರದಿ ವಾಚನೆ, ಜಮಾ-ಖರ್ಚು, ವ್ಯಾಪಾರ ವಹಿವಾಟು, ಲಾಭ ನಷ್ಟ, ಕರಡು ಬಜೆಟ್ಗಿಂತ ಹೆಚ್ಚಾದ ಖರ್ಚಿಗೆ ಉಪ ಬಜೆಟ್, ೨೦೨೪-೨೫ ಕರಡು ಬಜೆಟ್ನ್ನು ಕಾರ್ಯದರ್ಶಿ ಮಂಡಿಸಿದರು.
ಸಭೆಯಲ್ಲಿ ಅಗಲಿದ ಬ್ಯಾಂಕ್ನ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯ ಸದಸ್ಯ ಬಂಟಪ್ಪ ನಾಯ್ಕ್, ಯಕ್ಷಗಾನ ಕಲಾವಿದ ಶಂಕರಾಚಾರ್ಯ ಕೋಳ್ಯೂರು, ದಯಾನಂದ ಪಾವೂರು ರನ್ನು ಸನ್ಮಾನಿಸಲಾಯಿತು. ಶ್ರೀಪತಿ ರಾವ್, ಐತ್ತಪ್ಪ ಎಸ್.ಎ, ಮೊಹಮ್ಮದ್ ಹನೀಫ್, ಸುರೇಶ್ ಬಿ.ವಿ, ನಾರಾಯಣ ನಾವಡ, ವಿಠಲ ಭಟ್ ಭಾಗವಹಿಸಿದರು. ಉಪಾಧ್ಯಕ್ಷ ಅಬ್ದುಲ್ಲ ಬಾಕಿಮಾರು, ಮೊಹಮ್ಮದ್ ಇಕ್ಬಾಲ್, ಸೀತಾರಾಮ ಪೂಜಾರಿ, ಗಣೇಶ್ ಪಾವೂರು, ಸುನಿತಾ ಡಿ’ಸೋಜಾ, ಸಂಜೀವಿ, ಅಬ್ದುಲ್ ಖಾದರ್ ಭಾಗವಹಿಸಿದರು. ಕಾರ್ಯದರ್ಶಿ ಶ್ರೀವತ್ಸ ಭಟ್ ಸ್ವಾಗತಿಸಿ, ಸಿಬ್ಬಂದಿ ಜೀವನ್ ವಂದಿಸಿದರು. ಸೆಲ್ಕೋ ಸೋಲಾರ್ರವರಿಂದ ಪ್ರಾತ್ಯಕ್ಷಿಕೆ, ಸಹಕಾರಿ ತರಬೇತಿ ಕೇಂದ್ರ ಕಣ್ಣೂರು ಇದರ ನಿರ್ದೇಶಕ ಬಾಬುರಿಂದ ಸಹಕಾರಿ ಸಂಘದ ಸದಸ್ಯರ ಜವಾಬ್ದಾರಿ, ಬೆಳವಣಿಗೆ ಬಗ್ಗೆ ತರಬೇತಿ ನಡೆಯಿತು. ಪೂಜಾ ಲಕ್ಷ್ಮಿ ಪ್ರಾರ್ಥನೆ ಹಾಡಿದರು.