ವರ್ಕಾಡಿಯಲ್ಲಿ ಕೇರಳೋತ್ಸವ ನಡೆಸದೆ ಯುವಕರಿಗೆ ವಂಚನೆ- ಎಂ.ಎಸ್.ಎಫ್

ಕಾಸರಗೋಡು: ವರ್ಕಾಡಿ ಪಂಚಾಯತ್‌ನಲ್ಲಿ ಕೇರಳೋತ್ಸವ ನಡೆಸದೆ ಆಡಳಿತ ಯುವಕರನ್ನು ವಂಚಿಸಿದೆಯೆಂದು ಎಂಎಸ್‌ಎಫ್ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಅನ್ಸಾರ್ ವರ್ಕಾಡಿ  ಆರೋಪಿಸಿದ್ದಾರೆ.

ಕೇರಳದ ಎಲ್ಲಾ ಪಂಚಾಯತ್‌ಗಳಲ್ಲೂ ಕೇರಳೋತ್ಸವ ಪಂಚಾಯತ್ ಮಟ್ಟದಲ್ಲಿ ನಡೆಸಿ ಸ್ಪರ್ಧಾಳುಗಳನ್ನು ಬ್ಲೋಕ್ ಪಂಚಾಯತ್ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಆದರೆ ವರ್ಕಾಡಿ ಪಂಚಾಯತ್‌ನಲ್ಲಿ ಸ್ಪರ್ಧೆ ನಡೆಸದೆ ಕಳೆದ ವರ್ಷದ ಸ್ಪರ್ಧಾ ವಿಜೇತರನ್ನು ಬ್ಲೋಕ್ ಮಟ್ಟದ ಸ್ಪರ್ಧೆಗೆ ಭಾಗವಹಿಸಲು ನಿರ್ಧರಿಸಲಾಗಿದೆ. ಈ ಮೂಲಕ ಪಂಚಾಯತ್‌ನ ಯುವಕರ ಕಲಾ- ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲಿರುವ ಅವಕಾಶವನ್ನು ಆಡಳಿತ ಸಮಿತಿ ಇಲ್ಲದಾಗಿಸಿದೆ ಎಂದು ಅನ್ಸಾರ್ ವರ್ಕಾಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

RELATED NEWS

You cannot copy contents of this page