ವಸತಿಗೃಹದಲ್ಲಿ ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ನಗರದ ವಸತಿಗೃಹವೊಂದರಲ್ಲಿ ಕೊಠಡಿಯೊಳಗೆ ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೆಂಗಳ ಗ್ರಾಮದ ರಹ್ಮತ್ ನಗರದ ಕನಿಯಡ್ಕಂ ಹೌಸ್‌ನ ಮಾಹಿನ್ ಕುಟ್ಟಿ -ನಫೀಸ ದಂಪತಿ ಪುತ್ರ, ಟಿಪ್ಪರ್ ಲಾರಿ ಚಾಲಕ ಅಸೈನಾರ್ (33) ಸಾವನ್ನಪ್ಪಿದ ಯುವಕ. ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿರುವ ವಸತಿಗೃಹವೊಂದರ ಕೊಠಡಿಯೊಳಗೆ ಇವರು ನಿನ್ನೆ ಮಧ್ಯಾಹ್ನ ನೇಣು ಬಿಗಿದು ಸಾವನ್ನ ಪ್ಪಿದ ಸ್ಥಿತಿಯಲ್ಲಿ ವ್ಯಕ್ತಿಯಾಗಿದ್ದಾರೆ. ವಿಷಯ ತಿಳಿದ ಕಾಸರಗೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹ ಜರು ನಡೆಸಿದ ನಂತರ ಮೃತದೇಹ ವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ದರು. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮೃತರು ಸಹೋದರ-ಸಹೋದರಿಯರಾದ ಹುಸೈನ್, ಖಾದರ್,ಸುಬೈದಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.