ವಾಮಂಜೂರು ಚೆಕ್‌ಪೋಸ್ಟ್‌ನಲ್ಲಿ ಸರಕಾರಿ ವಾಹನ ಅನಾಥ: ತುಕ್ಕು ಹಿಡಿದು ನಾಶದತ್ತ

ಮಂಜೇಶ್ವರ: ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್ ಬಳಿ ಮಾರಾಟ ತೆರಿಗೆ ಇಲಾಖೆಯ ವಾಹನ ಒಂದು ತುಕ್ಕು ಹಿಡಿದು ನಾಶವಾಗುತ್ತಿದೆ. ಲಕ್ಷಾಂತರ ರೂ. ಬೆಲೆಯ ಈ ವಾಹನ ಈಗ ಯಾರಿಗೂ ಬೇಡದೆ ನಾಶವಾಗುತ್ತಿರುವುದು ಸ್ಥಳೀಯರಲ್ಲಿ ರೋಷ ಭಾವನೆ ಸೃಷ್ಟಿಸಿದೆ. ಈ ಮೊದಲು ಇಲ್ಲಿ ಅಬಕಾರಿ ಚೆಕ್‌ಪೋಸ್ಟ್ ಹಲವು ವರ್ಷಗಳ ಕಾಲ ಕಾರ್ಯಾಚರಿಸುತ್ತಿತ್ತು. ಇದರ ಬಳಿಯಲ್ಲೇ ಮಾರಾಟ ತೆರಿಗೆ ಇಲಾಖೆ ಕಚೇರಿಯೂ ಕಾರ್ಯಾಚರಿಸುತ್ತಿತ್ತು. ಆದರೆ ಜಿಎಸ್‌ಟಿ ವ್ಯವಸ್ಥೆ ಜ್ಯಾರಿಗೆ ಬಂದ ಬಳಿಕ ಮಾರಾಟ ತೆರಿಗೆ ಚೆಕ್‌ಪೋಸ್ಟ್ ಸ್ಥಗಿತಗೊಂಡರೂ ವಾಹನ ಮಾತ್ರ ಇಲ್ಲೇ ಉಳಿದುಕೊಂಡಿತ್ತು. ಈಗ ಇದು ಬಿಸಿಲು, ಮಳೆ ಎನ್ನದೆ ಹಲವು ಕಾಲದಿಂದ ಹಾಗೇ ಉಳಿದುಕೊಂಡಿದ್ದು, ತುಕ್ಕು ಹಿಡಿದು ನಾಶದತ್ತ ಸಾಗುತ್ತಿದೆ. ಅಧಿಕಾರಿಗಳು ಗಮನ ಹರಿಸಿ ಈ ವಾಹನವನ್ನು ಉಪಯುಕ್ತಗೊಳಿಸಬಹುದಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

You cannot copy contents of this page