ಕಾಸರಗೋಡು: ವಾರಂಟ್ ಆರೋ ಪಿಯೋರ್ವನನ್ನು ಕಣ್ಣೂರು ವಿಮಾನ ನಿಲ್ದಾಣದಿಂದ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಮಧೂರು ಬಿಲಾಲ್‌ನಗರದ ಮನ್ಸೂರ್ (23) ಬಂಧಿತ ಆರೋಪಿ. ಈತ ೨೦೧೮ರಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲು ಗೊಂಡ ಹಲ್ಲೆ ಪ್ರಕರಣ ವೊಂದರ ಆರೋಪಿಯಾಗಿದ್ದನೆಂದೂ ನಂತರ ನ್ಯಾಯಾಲಯದಲ್ಲಿ ಹಾಜರಾ ಗದೆ ಗಲ್ಫ್‌ಗೆ ತೆರಳಿದ್ದನು. ಅದಕ್ಕೆ ಸಂ ಬಂಧಿಸಿ ಆತನ ಪತ್ತೆಗಾಗಿ ನ್ಯಾಯಾ ಲಯ ಎಲ್‌ಪಿಸಿ ವಾರಂಟ್ ಜ್ಯಾರಿಗೊ ಳಿಸಿತ್ತು. ಆ ಕುರಿತಾದ ಮಾಹಿತಿಯನ್ನು ವಿಮಾನ ನಿಲ್ದಾಣಕ್ಕೂ ನೀಡಲಾಗಿತ್ತು.
ಈ ಮಧ್ಯೆ ಆರೋಪಿ ನಿನ್ನೆ ಗಲ್ಫ್‌ನಿಂದ ವಿಮಾನದಲ್ಲಿ ಕಣ್ಣೂರು ನಿಲ್ದಾ ಣಕ್ಕೆ ಬಂದಿಳಿದಿದ್ದನು. ಅಲ್ಲಿ ಆತನನ್ನು ತಡೆದು ನಿಲ್ಲಿಸಿದ ಬಳಿಕ ನೀಡಲಾದ ಮಾಹಿ ತಿಯಂತೆ ವಿದ್ಯಾನಗರ ಪೊಲೀಸರು ವಿಮಾನ ನಿಲ್ದಾಣಕ್ಕೆ ಸಾಗಿ ಆತನನ್ನು ಬಂಧಿಸಿದ್ದಾರೆ.