ವಾರೀಸುದಾರರಿಲ್ಲದ ಮೃತದೇಹಕ್ಕೆ ಸೇವಾ ಭಾರತಿಯಿಂದ ಅಂತ್ಯಸಂಸ್ಕಾರ

ಉಪ್ಪಳ: ದೈಗೋಳಿ ಸತ್ಯಸಾಯಿ ಸೇವಾಶ್ರಮದಲ್ಲಿದ್ದ ರಾಮಕೃಷ್ಣ (72) ಇತ್ತೀಚೆಗೆ ನಿಧನ ಹೊಂದಿದ್ದು, ಇವರ ಮೃತದೇಹದ ಅಂತ್ಯ ಸಂಸ್ಕಾರವನ್ನು ನಿನ್ನೆ ಸೇವಾಭಾರತಿ ಕಾರ್ಯಕರ್ತರು ಚೆರುಗೋಳಿ ರುದ್ರಭೂಮಿಯಲ್ಲಿ   ನಡೆಸಿದರು. ಹಲವು ವರ್ಷಗಳ ಹಿಂದೆ ಸುಬ್ರಹ್ಮಣ್ಯ ಪರಿಸರದ ರಸ್ತೆಯಲ್ಲಿ ತಿರುಗಾಡುತ್ತಿದ್ದ ಇವರನ್ನು ದೈಗೋಳಿ ಸೇವಾಶ್ರಮಕ್ಕೆ ಕರೆತರಲಾಗಿತ್ತು.

Leave a Reply

Your email address will not be published. Required fields are marked *

You cannot copy content of this page