ವಾಹನ ಅಪಘಾತ: ಉಚಿತ ಚಿಕಿತ್ಸೆ ಕೇರಳದ 643 ಆಸ್ಪತ್ರೆಗಳಲ್ಲಿ ಲಭ್ಯ

ಕಾಸರಗೋಡು: ವಾಹನ ಅಪಘಾತದಿಂದ ಗಾಯಗೊಂಡವರಿಗೆ ಒಂದೂವರೆ ಲಕ್ಷ ರೂ. ತನಕ ಉಚಿತ ಚಿಕಿತ್ಸೆ ನೀಡುವ ಯೋಜನೆ ಪ್ರಕಾರ ಕೇರಳದ 643 ಆಸ್ಪತ್ರೆಗಳಲ್ಲಿ ಈ ಸೇವೆ ಲಭಿಸಲಿದೆ.

ವಾಹನ ಅಪಘಾತದಲ್ಲಿ ಗಾಯಗೊಂಡವರಿಗೆ ಈ ಯೋಜನೆ ಪ್ರಕಾರ ಒಂದೂವರೆ ಲಕ್ಷ ರೂ. ತನಕ ಅಥವಾ ಏಳು ದಿನಗಳ ತನಕ ಉಚಿತ ಚಿಕಿತ್ಸೆ ಲಭಿಸಲಿದೆ. ಇದು ಕ್ಯಾಶ್‌ಲೆಸ್ ಟ್ರೀಟ್‌ಮೆಂಟ್ ಆಫ್ ರೋಡ್ ಆಕ್ಸಿಡೆಂಟ್ ವಿಕ್ಟೀಮ್ ಸ್ಕೀಮ್- 2025 ಎಂಬ ಹೆಸರಲ್ಲಿ ಕೇಂದ್ರ ಸರಕಾರ ಜ್ಯಾರಿಗೊಳಿಸಿದ ಯೋಜನೆಯಾಗಿದೆ. ಇದರಂತೆ ಪ್ರಧಾನಮಂತ್ರಿ ಆರೋಗ್ಯ ಯೋಜನೆ (ಎಬಿಪಿಎವೈ)ಯಲ್ಲಿ ಎಂ ಪ್ಯಾನಲ್‌ನಲ್ಲಿ ಒಳಗೊಂಡಿರುವ  ಕೇರಳದ 643  ಆಸ್ಪತ್ರೆಗಳಲ್ಲಿ ಈ ಉಚಿತ ಚಿಕಿತ್ಸೆ ಲಭಿಸಲಿದೆ. ಇದರ ಹೊರತಾಗಿ ವಾಹನ ಅಪಘಾತದಲ್ಲಿ ಗಾಯಗೊಂಡು ಇತರ ಆಸ್ಪತ್ರೆಗಳಲ್ಲಿ  ದಾಖಲುಗೊಂಡವರಿಗೆ ಇದರ ಪ್ರಯೋಜನ ಲಭಿಸಲಿದೆ. ಆದರೆ ಇಂತಹ ಆಸ್ಪತ್ರೆಗಳನ್ನು ಪ್ರಸ್ತುತ ಯೋಜನೆಗಾಗಿ ನೇರವಾಗಿ ಕ್ಲೈಮ್ ಮಾಡಬೇಕಾಗಿದೆ.

RELATED NEWS

You cannot copy contents of this page