ವಾಹನದಲ್ಲಿ 20 ಕಿಲೋ ಗಾಂಜಾ ಸಹಿತ ಬದಿಯಡ್ಕದ ಮೂವರ ಸೆರೆ

ಬದಿಯಡ್ಕ: ವಾಹನದಲ್ಲಿ ಸಾಗಿಸುತ್ತಿದ್ದ ೨೦ ಕಿಲೋ ಗಾಂಜಾ ಸಹಿತ ಬದಿಯಡ್ಕ ನಿವಾಸಿಗಳಾದ ಮೂವರನ್ನು ಕಲ್ಲಿಕೋಟೆಯಿಂದ ಅಲ್ಲಿನ ಸಿಟಿ ನರ್ಕೋಟಿಕ್ಸ್ ಸೆಲ್‌ನ ಅಸಿಸ್ಟೆಂಟ್ ಕಮೀಷನರ್ ಕೆ.ಎ. ಬೋಸ್‌ರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಬದಿಯಡ್ಕ ನಿವಾಸಿಗಳಾದ ಕೊಂಬ್ರಾಚೆ ಹೌಸ್‌ನ ಜಿ.ಸಿ. ಶ್ರೀಜಿತ್ (30) ಉಳ್ಳೋಡಿ ಹೌಸಿನ ಕೆ.  ಕೃತಿಗುರು (32) ಮತ್ತು ಫಾತಿಮಾ ಮಂಜಿಲ್‌ನ ಮುಹಮ್ಮದ್ ಅಶ್ರಫ್ (37) ಬಂಧಿತ ಆರೋಪಿಗಳು.

ಕಲ್ಲಿಕೋಟೆ ನಗರದ ಮಲಪರಂಬು ಜಂಕ್ಷನ್‌ನಲ್ಲಿ ಪೊಲೀಸರು ಮೊನ್ನೆ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ವೇಳೆ ಆ ದಾರಿಯಾಗಿ ಆರೋಪಿಗಳು ಬಂದ ವಾಹನವನ್ನು ತಡೆದು ನಿನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಅದರಲ್ಲಿ ಎಂಟು ಪ್ಲಾಸ್ಟಿಕ್ ಚೀಲಗಳಲ್ಲಾಗಿ ತುಂಬಿಸಿಡಲಾಗಿದ್ದ 20.465 ಕಿಲೋ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಆ ವಾಹನದಲ್ಲಿದ್ದ ಮೂವರು ಆರೋಪಿಗಳನ್ನೂ ಮಾಲು ಸಹಿತ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಲು ಸಾಗಿಸಲು ಉಪಯೋಗಿಸಲಾಗಿದ್ದ ವಾಹನವನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಶಪಡಿಸಲಾದ ಗಾಂಜಾಕ್ಕೆ ಸುಮಾರು ಎಂಟು ಲಕ್ಷ ರೂ. ಬೆಲೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಶ್ರೀಜಿತ್‌ನನ್ನು ಒಂದು ವರ್ಷದ ಹಿಂದೆ ರಾಮನಾಟ್ಟುಂಗರದಿಂದ 9 ಕಿಲೋ ಗಾಂಜಾದೊಂದಿಗೆ ಬಂಧಿಸಲಾಗಿ ತ್ತೆಂದೂ, ಅದರಂತೆ ಆತನ ವಿರುದ್ಧ ಫಾರೋಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲುಗೊಂಡಿದೆ. ನಂತರ ಆತ ಜಾಮೀನಿನಲ್ಲಿ ಬಿಡುಗಡೆ ಗೊಂಡು ಮತ್ತೆ ಮಾದಕವಸ್ತು ಸಾಗಾಟ ದಂಧೆ ಮುಂದುವರಿಸಿದ್ದನೆಂದು ಪೊಲೀಸರು  ತಿಳಿಸಿದ್ದಾರೆ. ಮಾದಕ ವಸ್ತು ಸಾಗಾಟ ದಂಧೆಯ ಪ್ರಧಾನಕೊಂ ಡಿಯಾ ಗಿರುವ ಈತ ಆಂಧ್ರಾ ಪ್ರದೇಶದಿಂದ ಬೃಹತ್ ಪ್ರಮಾಣದಲ್ಲಿ ಗಾಂಜಾ ಖರೀದಿಸಿ, ಅದನ್ನು ಕಾಸರಗೋಡಿನಲ್ಲಿ  ದಾಸ್ತಾನು ಇರಿಸಿದ ನಂತರ ಅದನ್ನು ವಾಹನದಲ್ಲಿ ಇತರ ಕೇಂದ್ರಗಳಿಗೆ ಸಾಗಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page