ವಿದ್ಯಾಗಿರಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಅಯ್ಯಪ್ಪನ ಬೆಳ್ಳಿಯ ಛಾಯಾಚಿತ್ರ ಪ್ರತಿಷ್ಠೆ

ಬದಿಯಡ್ಕ: ವಿದ್ಯಾಗಿರಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಧರ್ಮಶಾಸ್ತಾಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಬೆಳ್ಳಿ ಛಾಯಾಚಿತ್ರ ಪ್ರತಿಷ್ಠೆ ವೇದಮೂರ್ತಿ ಬ್ರಹ್ಮಶ್ರೀ ಗಣೇಶ್ ಭಟ್ ಮುಂಡೋಡು ಅವರ ನೇತೃತ್ವದಲ್ಲಿ ಗುರುಸ್ವಾಮಿ ರಮೇಶ್ ಆಳ್ವ ಮತ್ತು ಶಿಷ್ಯವೃಂದದವರಿAದ ನಡೆಯಿತು. ವಿವಿಧ ಭಜನಾ ಸಂಘಗಳಿAದ ನಿರಂತರ ಭಜನಾ ಕಾರ್ಯಕ್ರಮ ಜರಗಿತು. ಮಹಾಗಣಪತಿ ಹೋಮ, ಶರಣಂ ವಿಳಿ, ಮಹಾಮಂಗಳಾರತಿ, ಸತ್ಸಂಗ ಅಪರಾಹ್ನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶ್ರೀ ಎಡನೀರು ಮಠ ಇವರ ಆಗಮನ, ಪೂರ್ಣಕುಂಭ ಸ್ವಾಗತ, ಧಾರ್ಮಿಕ ಸಭೆ ಜರಗಿತು.

RELATED NEWS

You cannot copy contents of this page