ವಿದ್ಯಾರ್ಥಿನಿಯನ್ನು ಹೊಸ ವರ್ಷಾಚರಣೆಗೆಂದು ಕರೆದೊಯ್ದು ಕಿರುಕುಳ
ಕೊಚ್ಚಿ: ಹೊಸವರ್ಷ ಆಚರಣೆಯಲ್ಲಿ ಭಾಗವಹಿಸಲೆಂದು ತಿಳಿಸಿ ವಿದ್ಯಾರ್ಥಿನಿ ಯನ್ನು ಪೋರ್ಟ್ ಕೊಚ್ಚಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಸಂಬಂಧ ಪೇಳಯ್ಕಪಳ್ಳಿ ಪ್ಲಾಕುಡಿ ನಿವಾಸಿ ಅಷ್ಕರ್ (21) ಎಂಬಾತನನ್ನು ಮೂವಾಟುಪುಳ ಪೊಲೀಸರು ಬಂಧಿಸಿ ಪೋಕ್ಸೋ ಕೇಸು ದಾಖಲಿಸಿದ್ದಾರೆ. ಈತ ಮಂಗಳವಾರ ವಿದ್ಯಾರ್ಥಿನಿಯನ್ನು ಪೋರ್ಟ್ ಕೊಚ್ಚಿಗೆ ಕರೆದೊಯ್ದಿದ್ದು, ಅಲ್ಲಿ ಕಿರುಕುಳ ನೀಡಿ ದ್ದಾನೆನ್ನಲಾಗಿದೆ. ಈ ವಿಷಯ ತಿಳಿದು ಆಕೆಯ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಅಷ್ಕರ್ ವಿರುದ್ಧ ಇದೇ ರೀತಿಯ ಪ್ರಕರಣ ಈ ಹಿಂದೆ ದಾಖಲಾಗಿದೆ ಎಂದು ತಿಳಿದು ಬಂದಿದೆ.