ವಿದ್ಯುತ್ ಬೇಲಿಯಿಂದ ಶಾಕ್ ತಗಲಿ ಇಬ್ಬರು ಸಹೋದರರು ಮೃತ್ಯು
ಕಲ್ಪೆಟ್ಟ: ವನ್ಯಮೃಗಗಳ ದಾಳಿ ತಡೆಗಟ್ಟಲು ಸ್ಥಾಪಿಸಿದ್ದ ವಿದ್ಯುತ್ ಬೇಲಿ ಯಿಂದ ಶಾಕ್ ತಗಲಿ ಇಬ್ಬರು ಸಹೋ ದರರು ಮೃತಪಟ್ಟ ಘಟನೆ ನಡೆದಿದೆ. ವಯನಾಡ್ ವಾಳವಟ್ಟ ಕರಿಂಗಣಿಕುನ್ನು ಎಂಬಲ್ಲಿನ ವರ್ಕಿ ಎಂಬವರ ಮಕ್ಕಳಾದ ಅನೂಪ್ ಹಾಗೂ ಶಿನು ಎಂಬವರು ಮೃತ ಪಟ್ಟ ದುರ್ದೈವಿಗಳಾಗಿದ್ದಾರೆ. ಇವರು ಬಾಡಿಗೆಗೆ ಪಡೆದು ನಡೆಸುತ್ತಿದ್ದ ಕೋಳಿ ಸಾಕಣೆ ಕೇಂದ್ರಕ್ಕೆ ವನ್ಯ ಮೃಗಗಳು ದಾಳಿ ನಡೆಸುವುದನ್ನು ತಡೆಯಲು ವಿದ್ಯುತ್ ಬೇಲಿ ನಿರ್ಮಿಸಲಾಗಿತ್ತು. ನಿನ್ನೆ ಬೆಳಿಗ್ಗೆ ಅಲ್ಲಿಗೆ ಸ್ಥಳದ ಮಾಲಕ ತಲುಪಿದಾಗ ಈ ಇಬ್ಬರು ಶಾಲ್ ತಗಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ.