ವಿದ್ಯುತ್ ಹೈಟೆನ್ಶನ್ ತಂತಿ ಮೇಲೆ ವಾಲಿ ನಿಂತಿರುವ ಮಾವಿನ ಮರ: ಅಪಾಯ ಭೀತಿ

ಪೈವಳಿಕೆ: ಚಿಪ್ಪಾರು ಶಾಲೆ ಬಳಿಯಲ್ಲಿ ಮಾವಿನ ಮರವೊಂದು ವಿದ್ಯುತ್ ತಂತಿ ಮೇಲೆ ಮುರಿದು ಬೀಳುವ ಸ್ಥಿತಿಯಲ್ಲಿದ್ದು ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯೆಂದು ಸ್ಥಳೀಯರು ತಿಳಿಸಿದ್ದಾರೆ.  ಈ ಮರ ವಿದ್ಯುತ್ ತಂತಿಯ ಭಾಗಕ್ಕೆ ವಾಲಿ ನಿಂತಿದೆ.  ಶಾಲಾ ವಿದ್ಯಾರ್ಥಿಗಳು, ನಾಗರಿಕರು ತುಂಬಿರುವ ಸ್ಥಳವಾಗಿರುವುದರಿಂದ ತಕ್ಷಣವೇ  ಪರಿಹಾರವುಂಟಾಗಬೇಕಾಗಿದೆ. ಮರ ವಿರುವ ಸ್ಥಳದ ಕೆಳಭಾಗದಲ್ಲಿ ಲಾಲ್‌ಬಾಗ್‌ಗೆ ಸಂಚರಿಸುವ ಪ್ರಧಾನ ರಸ್ತೆ ಇದ್ದು, ಬಸ್ ಸಹಿತ ಹಲವಾರು ವಾಹನಗಳು ಈ ಮೂಲಕ ಪ್ರತಿನಿತ್ಯ ಸಂಚರಿಸುತ್ತದೆ. ಹಲವು ತಿಂಗಳ ಹಿಂದೆ ಸ್ಥಳೀಯರ ನಿರಂತರ ಒತ್ತಾಯದ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆ ಉದ್ಯೋಗಸ್ಥರು ಮರ ಕಡಿಯಲು ತಲುಪಿದ್ದರು. ಆದರೆ ಅಂದು ಪರಿಸರದಲ್ಲಿ ಓಣಂ ಕಾರ್ಯಕ್ರಮ ನಡೆಯುತ್ತಿರುವುದರಿಂದ ಮರುದಿನ ಮರವನ್ನು ತೆರವುಗೊಳಿಸಲಾ ಗುವುದಾಗಿ ತಿಳಿಸಿಹೋದವರು ಇದುವರೆಗೂ ಬರಲಿಲ್ಲವೆಂದು ನಾಗರಿಕರು ತಿಳಿಸಿದ್ದಾರೆ. ಇನ್ನಾದರೂ ಮರವನ್ನು ತೆರವುಗೊಳಿಸಿ ಅಪಾಯವನ್ನು ತಪ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

You cannot copy contents of this page